ಕಿಮ್ ಕ್ರೂರ ಸರ್ವಾಧಿಕಾರಕ್ಕೆ ಟ್ರಂಪ್ ಕೆಂಡಾಮಂಡಲ

ಈ ಸುದ್ದಿಯನ್ನು ಶೇರ್ ಮಾಡಿ

Trump--00012

ಸಿಯೋಲ್. ನ.8-ಮಾರಕ ಅಣ್ವಸ್ತ್ರಗಳ ಮೂಲಕ ಜಗತ್ತಿಗೆ ಕಂಟಕಪ್ರಾಯವಾಗಿರುವ ಉತ್ತರಕೊರಿಯಾದ ಕಿಮ್ ಜಾಂಗ್ ಉನ್ ಕ್ರೂರ ಸರ್ವಾಧಿಕಾರಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಏಷ್ಯಾ ಪ್ರವಾಸದಲ್ಲಿರುವ ಟ್ರಂಪ್ ದಕ್ಷಿಣ ಕೊರಿಯಾದ ರಾಜಧಾನಿ ಸಿಯೋಲ್‍ನ ಸಂಸತ್ತಿನಲ್ಲಿ ಮಾತನಾಡಿ ಉತ್ತರಕೊರಿಯಾದ ಸರ್ವಾಧಿಕಾರಿಯಿಂದಾಗಿ ಆ ದೇಶದ ಜನತೆ ತೀವ್ರ ಯಾತನೆ ಮತ್ತು ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಕಿಮ್‍ನ ಸರ್ವಾಧಿಕಾರದ ಆಡಳಿತವು ಪೌರರನ್ನು ಸಮನಾಗಿ ಕಾಣುತ್ತಿಲ್ಲ. ಅದು ಜನರ ಆಶೋತ್ತರಗಳನ್ನು ಧಿಕ್ಕರಿಸಿದೆ ಎಂದು ತೀವ್ರ ಅಸಮಾಧಾನ ಸೂಚಿಸಿದರು.

ನೀವು (ಕಿಮ್) ಹೊಂದಿರುವ ಶಸ್ತ್ರಾಸ್ತ್ರಗಳು ನಿಮ್ಮನ್ನು ಎಂದಿಗೂ ಸುರಕ್ಷಿತವಾಗಿಡುವುದಿಲ್ಲ. ಅವುಗಳು ನಿಮ್ಮ ಆಡಳಿತಕ್ಕೆ ದೊಡ್ಡ ಅಪಾಯ ತಂದೊಡ್ಡುತ್ತವೆ. ಈ ಕರಾಳ ಮಾರ್ಗದಲ್ಲಿ ನೀನು ಇಡುವ ಪ್ರತಿಯೊಂದು ಹೆಜ್ಜೆಯೂ ನಿಮ್ಮ ಮುಖದಲ್ಲಿ ಗಂಡಾಂತರವನ್ನು ಹೆಚ್ಚಿಸುತ್ತದೆ ಎಂದು ಕಿಮ್‍ಗೆ ನೇರ ಎಚ್ಚರಿಕೆ ನೀಡಿದ ಅಮೆರಿಕ ಅಧ್ಯಕ್ಷರು, ದೇಶದ ಉತ್ತಮ ಭವಿಷ್ಯಕ್ಕಾಗಿ ಸರಿಯಾದ ಮಾರ್ಗದಲ್ಲಿ ನಡೆಯುವಂತೆ ಸಲಹೆ ಮಾಡಿದರು.

Facebook Comments

Sri Raghav

Admin