ಗುರಾಯಿಸಿದ ಯುವಕನ ಮೇಲೆ ಪರಿಚಯಸ್ಥರಿಂದಲೇ ಹಲ್ಲೆ

ಈ ಸುದ್ದಿಯನ್ನು ಶೇರ್ ಮಾಡಿ

man-hand
ಬೆಂಗಳೂರು, ನ.8- ಕ್ಷುಲ್ಲಕ ವಿಷಯಕ್ಕೆ ಗುರಾಯಿಸಿದ ಎಂದು ಯುವಕನೊಬ್ಬನಿಗೆ ಪರಿಚಯಸ್ಥರೇ ಹಲ್ಲೆ ಮಾಡಿ ಗಾಯಗೊಳಿಸಿರುವ ಘಟನೆ ಅಶೋಕನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಶಿವಾಸ್ (23) ಹಲ್ಲೆಗೊಳಗಾದ ಯುವಕ. ನಿನ್ನೆ ರಾತ್ರಿ ಫುಟ್ಬಾಲ್ ಸ್ಟೇಡಿಯಂ ಬಳಿ ಶಿವಾಸ್‍ಗೆ ಪರಿಚಯ ಸ್ಥರಾದ ಮೂರ್ನಾಲ್ಕು ಮಂದಿ ಎದುರಾಗಿದ್ದಾರೆ. ಈ ವೇಳೆ ಆತ ಗುರಾಯಿಸಿದ ಎಂಬ ಕಾರಣಕ್ಕೆ ಆತನ ಮೇಲೆ ಹಲ್ಲೆ ಮಾಡಿದ್ದಾರೆ. ಈತ ಪ್ರಾಣಾಪಾಯದಿಂದ ಪಾರಾ ಗಿದ್ದು, ಸೆಂಟ್‍ಜಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಅಶೋಕನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments

Sri Raghav

Admin