ಡಿ.5ರೊಳಗೆ ಮಳೆ ನೀರು ಕೊಯ್ಲು ಕಡ್ಡಾಯ ಅನುಷ್ಟಾನಕ್ಕೆ ಮೇಯರ್ ಆದೇಶ

ಈ ಸುದ್ದಿಯನ್ನು ಶೇರ್ ಮಾಡಿ

Mayor--02

ಬೆಂಗಳೂರು, ನ.8-ಮಳೆ ನೀರು ಕೊಯ್ಲು ಕಡ್ಡಾಯ ನಿರ್ಧಾರವನ್ನು ಡಿ.5 ರ ವೇಳೆಗೆ ಜಾರಿಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಮೇಯರ್ ಸಂಪತ್‍ರಾಜ್ ಇಂದಿಲ್ಲಿ ಅಧಿಕಾರಿಗಳಿಗೆ ತಾಕೀತು ಮಾಡಿದರು. ಬಿಬಿಎಂಪಿ ಪಶ್ಚಿಮ ವಲಯದ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಮೇಯರ್ ಅವರು, ಪಶ್ಚಿಮ ವಲಯದಲ್ಲಿ ಬರುವ 44 ವಾರ್ಡ್‍ಗಳಲ್ಲಿ ಮಳೆ ನೀರು ಕೊಯ್ಲು ಕಡ್ಡಾಯದ ಆದೇಶವನ್ನು ಡಿ.5ರೊಳಗೆ ಅನುಷ್ಟಾನಕ್ಕೆ ತರಬೇಕು. ಇಲ್ಲದಿದ್ದಲ್ಲಿ ಸಂಬಂಧಪಟ್ಟ ಅಧಿಕಾರಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಪಶ್ಚಿಮ ವಲಯ ವ್ಯಾಪ್ತಿಯಲ್ಲಿ ಬರುವ ಪಾಲಿಕೆ ಆಸ್ತಿಗಳನ್ನು ಗುರುತಿಸಿ ಅವುಗಳಿಗೆ ವಿಶಿಷ್ಟ ಗುರುತಿನ ಸಂಖ್ಯೆ (ಪಿಐಡಿ) ನೀಡಬೇಕು. ಜೊತೆಗೆ ಆಸ್ತಿ ಪಾಲಿಕೆಗೆ ಸೇರಿದ್ದು ಎಂಬುದನ್ನು ಬಿಬಿಎಂಪಿ ಲೋಗೋ ಸಮೇತ ದಾಖಲಿಸಬೇಕು ಎಂದು ಸೂಚನೆ ನೀಡಿದರು.44 ವಾರ್ಡ್‍ಗಳಲ್ಲಿ ಯಾವ ಯಾವ ಅನುದಾನದಡಿ ಏನೇನು ಕಾಮಗಾರಿ ಕೈಗೆತ್ತಿಕೊಂಡಿದ್ದೀರಿ ಎಂಬ ಸಂಪೂರ್ಣ ವಿವರ ನೀಡಿ. ಒಂದು ವೇಳೆ ಕಾಮಗಾರಿ ಕುಂಠಿತಗೊಂಡಿದ್ದರೆ, ಆ ಅಧಿಕಾರಿಗಳ ತಲೆದಂಡ ಪಡೆಯಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕೆಲವು ಕಾಮಗಾರಿ ಆರಂಭಕ್ಕೆ ಜಾಬ್‍ಕೋರ್ಡ್ ನೀಡಿದ್ದರೂ 15 ದಿನ ಕಳೆದರೂ ಕಾಮಗಾರಿ ಆದೇಶವನ್ನು ಅಧಿಕಾರಿಗಳು ನೀಡುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ. ಯಾವುದೇ ಅಧಿಕಾರಿಗಳು ಕಾಮಗಾರಿ ವಿಳಂಬಕ್ಕೆ ಕಾರಣಕರ್ತರಾದರೆ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದರು.
ನಂತರ ಮೇಯರ್ ಅವರು ದ್ವಿಚಕ್ರ ವಾಹನದಲ್ಲಿ ಪಶ್ಚಿಮ ವಲಯದಲ್ಲಿ ಕೈಗೆತ್ತಿಕೊಂಡಿರುವ ಕಾಮಗಾರಿಗಳು, ಇಂದಿರಾ ಕ್ಯಾಂಟೀನ್ ಕಾರ್ಯವೈಖರಿ ಹಾಗೂ ರಸ್ತೆ ಗುಂಡಿಗಳನ್ನು ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಉಪಮೇಯರ್ ಪದ್ಮಾವತಿ ನರಸಿಂಹಮೂರ್ತಿ, ಜಂಟಿ ಆಯುಕ್ತ ಬಸವರಾಜ್ ಮತ್ತಿತರ ಹಿರಿಯ ಅಧಿಕಾರಿಗಳು ಹಾಜರಿದ್ದರು.

Facebook Comments

Sri Raghav

Admin