ನಾಳೆ ಹಿಮಾಚಲ ಪ್ರದೇಶ 68 ಕ್ಷೇತ್ರಗಳಿಗೆ ಚುನಾವಣೆ, ಕಾಂಗ್ರೆಸ್- ಬಿಜೆಪಿ ನೇರ ಹಣಾಹಣಿ

ಈ ಸುದ್ದಿಯನ್ನು ಶೇರ್ ಮಾಡಿ

Voting--11

ಶಿಮ್ಲಾ,ನ.8- ಕಾಂಗ್ರೆಸ್ ಮತ್ತು ಬಿಜೆಪಿ ಜಿದ್ದಾಜಿದ್ದಿನ ಪೈಪೋಟಿಗೆ ಸಾಕ್ಷಿಯಾಗಿರುವ ಹಿಮಾಚಲ ಪ್ರದೇಶದ 68 ವಿಧಾನಸಭಾ ಕ್ಷೇತ್ರಗಳಿಗೆ ನಾಳೆ ಮತದಾನ ನಡೆಯಲಿದೆ. ಈ ಚುನಾವಣೆಯು ಮುಖ್ಯಮಂತ್ರಿ ವೀರಭದ್ರಸಿಂಗ್ ಅವರಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದ್ದು, ಕಾಂಗ್ರೆಸ್ ಭದ್ರ ಕೋಟೆ ವಶಪಡಿಸಿಕೊಳ್ಳಲು ಬಿಜೆಪಿ ತವಕಿಸುತ್ತಿದೆ. ಚುನಾವಣೆ ಹಿನ್ನೆಲೆಯಲ್ಲಿ ಹಿಮಾಚಲ ಪ್ರದೇಶದಿಂದ ವ್ಯಾಪಕ ಬಂದೋಬಸ್ತ್ ಮಾಡಲಾಗಿದೆ. ಬಿಜೆಪಿ ತನ್ನ ಸೀಟು ಗಳಿಕೆಯನ್ನು 26 ಸ್ಥಾನಗಳಿಂದ 52 ಸ್ಥಾನಗಳಿಗೆ ಹೆಚ್ಚಿಸಿಕೊಳ್ಳಲಿದೆ. ಕಾಂಗ್ರೆಸ್ ಹಾಲಿ 36 ಸ್ಥಾನಗಳಲ್ಲಿ 21 ಸ್ಥಾನಗಳನ್ನು ಕಳೆದುಕೊಳ್ಳಲಿದೆ ಎಂದು ಸಮೀಕ್ಷೆ ಹೇಳಿದೆ.

ಹಿಮಾಚಲ ಪ್ರದೇಶದಲ್ಲಿ ನಿರುದ್ಯೋಗ ಸಮಸ್ಯೆ ಮಿತಿ ಮೀರಿದೆ ಎಂದು ಶೇ.37ರಷ್ಟು ಜನರು ಹೇಳಿದ್ದಾರೆ. ನೀರು, ರಸ್ತೆ, ವಿದ್ಯುತ್ ಸೇರಿದಂತೆ ಮೂಲ ಸೌಕರ್ಯಗಳ ಅಭಿವೃದ್ಧಿ ಎರಡನೇ ಸ್ಥಾನದ ಶೇ.37ರಷ್ಟು ಜನರು ಈ ಸಮಸ್ಯೆಗಳತ್ತ ಬೆಟ್ಟು ಮಾಡಿದ್ದಾರೆ. ಭ್ರಷ್ಟಾಚಾರ ಮತ್ತು ಇತರ ಕಾರಣಗಳನ್ನು ಶೇಕಡಾ 9ರಷ್ಟು ಜನರು ಬೆಂಬಲಿಸಿದ್ದಾರೆ. ಈ ಸಮಸ್ಯೆಗಳ ಪರಿಹಾರಕ್ಕೆ ಬಿಜೆಪಿಯೇ ಅತ್ಯುತ್ತಮ ಎಂಬುದು ಜನರ ಅಭಿಪ್ರಾಯವಾಗಿದೆ.

ಮುಂದಿನ ಸಿಎಂ ಯಾರು?:

ಶೇ.33 ರಷ್ಟು ಜನರು ಮುಂದಿನ ಮುಖ್ಯಮಂತ್ರಿಯಾಗಿ ಬಿಜೆಪಿಯ ಪ್ರೇಮï ಕುಮಾರï ಧುಮಾಲï ರನ್ನು ನೋಡಲು ಬಯಸಿದ್ದಾರೆ. ಇನ್ನು ಶೇಕಡಾ 32ರಷ್ಟು ಜನರು ಹಾಲಿ ಮುಖ್ಯಮಂತ್ರಿ ವೀರಭದ್ರ ಸಿಂಗï ರನ್ನು ಬೆಂಬಲಿಸಿದ್ದಾರೆ. ಬಿಜೆಪಿಯ ಕೇಂದ್ರ ಸಚಿವರಾದ ಜೆಪಿ ನಡ್ಡಾ ಹಾಗೂ ಅನುರಾಗï ಠಾಕೂರï ಮುಖ್ಯಮಂತ್ರಿಯಾಗಬೇಕು ಎಂದು ಕ್ರಮವಾಗಿ ಶೇಕಡಾ 12 ಮತ್ತು 5ರಷ್ಟು ಜನ ಬಯಸಿದ್ದಾರೆ.  ಹಿಂದಿನ ಯಾವ ಸರಕಾರಗಳು ನಿಮಗೆ ಉತ್ತಮ ಎಂದು ಜನರ ಬಳಿ ಕೇಳಿದ್ದಕ್ಕೆ ಶೇಕಡಾ 41.2ರಷ್ಟು ಜನರು ವೀರಭದ್ರ ಸಿಂಗ್‍ರ ಕಾಂಗ್ರೆಸ್ ಸರಕಾರವೇ ಉತ್ತಮ ಎಂದಿದ್ದಾರೆ. ಹೀಗಿದ್ದೂ ಈ ಬಾರಿ ಬಿಜೆಪಿ ಸರಕಾರ ಬೇಕು ಎಂದು ಜನರು ಬಯಸಿದ್ದಾರೆ. ಪ್ರೇಮ್‍ಕುಮಾರ್ ಧುಮಾಲï ರ ಬಿಜೆಪಿ ಸರಕಾರ ಉತ್ತಮ ಎಂದು ಶೇಕಡಾ 26.9 ಜನರು ಹೇಳಿದ್ದಾರೆ.

ಹಿಂದಿನ ಸಮೀಕ್ಷೆಗಳಲ್ಲೂ ಬಿಜೆಪಿಗೆ ಬೆಂಬಲ:

68 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ 43-47 ಸ್ಥಾನಗಳನ್ನು ಗೆಲ್ಲಲಿದೆ ಎಂದು ¿ಇಂಡಿಯಾ ಟುಡೇ-ಆಕ್ಸಿಸ್ ಮೈ ಇಂಡಿಯಾ ಜನಾಭಿಪ್ರಾಯದಲ್ಲಿ ತಿಳಿದು ಬಂದಿತ್ತು. ಹಿಮಾಚಲ ಪ್ರದೇಶದಲ್ಲಿ ಬಹುಮತಕ್ಕೆ 35 ಸ್ಥಾನಗಳು ಬೇಕಾಗಿವೆ. ನಾಳೆ ಇಲ್ಲಿ ಮತದಾನ ನಡೆಯಲಿದೆ. ಡಿಸೆಂಬರ್ 18ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.

Facebook Comments

Sri Raghav

Admin