ನೋಟು ಅಮಾನ್ಯೀಕರಣದಿಂದ ದೇಶಕ್ಕೆ ದೊಡ್ಡ ಹಾನಿಯಾಗಿದೆ : ಹೆಚ್ಡಿಕೆ

ಈ ಸುದ್ದಿಯನ್ನು ಶೇರ್ ಮಾಡಿ

HDK--01

ಚಿಕ್ಕಮಗಳೂರು, ನ.8-ನೋಟು ಅಮಾನ್ಯೀಕರಣದಿಂದ ರೈತರು, ಕೂಲಿ ಕಾರ್ಮಿಕರು, ಹಿಂದುಳಿ ದವರಿಗೆ ಸಾಕಷ್ಟು ಸಮಸ್ಯೆ ಎದುರಾಗಿದ್ದು, ನೋಟು ಅಮಾನೀಕರಣ ಬಗ್ಗೆ ಹೊಗಳಿದ ಆರ್ಥಿಕ ತಜ್ಞರೂ ಕೂಡ ಟೀಕಿಸುವಂತಾಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ವರ್ಷ ಇದೇ ದಿನದಂದು ಪ್ರಧಾನಿ ಮೋದಿ ಅವರು ನೋಟು ಅಮಾನೀಕರಣ ಮಾಡಿದ್ದರು. ಸಚಿವ ಸಂಪುಟದ ಸಹೋದ್ಯೋಗಿಗಳೊಂದಿಗೆ ಚರ್ಚಿಸದೆ ತೆಗೆದುಕೊಂಡ ನಿರ್ಧಾರದಿಂದ ಸಾಕಷ್ಟು ಸಮಸ್ಯೆಗಳಾಯಿತು.

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಮುಗುಳವಳ್ಳಿಯ ಧರ್ಮಪಾಲರ ಮನೆಯಲ್ಲಿ ಇಂದು ಜೆಡಿಎಸ್ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬೆಳಗಿನ ಉಪಹಾರವಾಗಿ ರಾಗಿರೊಟ್ಟಿ ಸೇವಿಸಿದರು. ಈ ಸಂದರ್ಭದಲ್ಲಿ ಧರ್ಮಪಾಲ ಅವರ ಕುಟುಂಬದ ಸದಸ್ಯರು ಹಾಗೂ ಪಕ್ಷದ ಮುಖಂಡರು ಉಪಸ್ಥಿತರಿದ್ದರು.

ದೇಶದ ಧನಿಕರ ಕಾಳಧನವನ್ನು ವಶಪಡಿಸಿಕೊಂಡು ದೇಶದ ಅಭಿವೃದ್ಧಿಗೆ ಬಳಸುವುದಾಗಿ ಹೇಳಿದ್ದ ಪ್ರಧಾನಿ ಅವರು ಯಾವುದೇ ಶಾಶ್ವತ ಅಭಿವೃದ್ಧಿ ಕಲಸಗಳನ್ನು ಮಾಡಲಿಲ್ಲ. ಬದಲಾಗಿ ಹೊಸ ನೋಟು ಮುದ್ರಿಸಲು ಸಾವಿರಾರು ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದು ಟೀಕಿಸಿದರು. ಇನ್ನು ಕಾಂಗ್ರೆಸ್‍ನವರು ಕರಾಳದಿನ ಆಚರಿಸುತ್ತಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಿಗಿಂತ ದೇಶದ ಅಭಿವೃದ್ಧಿಗೆ ಹಿನ್ನಡೆಯಾಗಿದೆ ವಿಶ್ವ ಬ್ಯಾಂಕ್‍ನವರು ಆರ್ಥಿಕ ಸುಧಾರಣೆ ಬಗ್ಗೆ ನೀಡುವ ಪ್ರಮಾಣಪತ್ರ ಅಮೆರಿಕಾಗೆ ಸರಿಯಾಗಬಹುದು. ನಮ್ಮ ದೇಶಕ್ಕೆ ಇದರಿಂದ ಯಾವುದೇ ಉಪಯೋಗವಿಲ್ಲ ಎಂದು ಕುಮಾರಸ್ವಾಮಿ, 2025ಕ್ಕೆ ರೈತರ ಆದಾಯ ದ್ವಿಗುಣ ಮಾಡುವುದಾಗಿ ಹೇಳಿದ್ದಾರೆ. ಅಧಿಕಾರಕ್ಕೆ ಬಂದು ಮೂರು ವರ್ಷ ಕಳೆದರೂ ಏನೂ ಮಾಡದ ಪ್ರಧಾನಿ ಮೋದಿ 2025ಕ್ಕೆ ಆದಾಯ ದ್ವಿಗುಣ ಮಾಡುವುದಾಗಿ ಹೇಳಿರುವುದು ಹಾಸ್ಯಾಸ್ಪದ ಎಂದರು.

ಇನ್ನು ಸ್ವಚ್ಛ ಭಾರತ, ಸ್ಮಾರ್ಟ್‍ಸಿಟಿ, ಆದರ್ಶ ಗ್ರಾಮ ಯಾವುದೇ ಯೋಜನೆಗಳು ಸಫಲವಾಗಿಲ್ಲ. ಅಮಿತ್ ಷಾ ಅವರು ಕೇಂದ್ರದಿಂದ ಬಂದು ರಾಜ್ಯದ ಬಗ್ಗೆ ಲೆಕ್ಕ ಕೇಳುತ್ತಾರೆ. ರಾಜ್ಯದಲ್ಲಿ ಲೆಕ್ಕ ಕೇಳು ಅವರ್ಯಾರು ಎಂದು ಪ್ರಶ್ನಿಸಿದರು. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾಹೀರಾತಿಗಾಗಿ ಕೋಟ್ಯಂತರ ರೂ. ಹಣ ಖರ್ಚು ಮಾಡಿ ಪ್ರಚಾರ ಪಡೆಯುತ್ತಿದೆಯೇ ಹೊರತು ಯಾವುದೇ ಅಭಿವೃದ್ಧಿ ಕೆಲಸ ಮಾಡುತ್ತಿಲ್ಲ ಎಂದು ರಾಜ್ಯಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ನಿನ್ನೆ ಮೈಸೂರಿನಿಂದ ಆರಂಭವಾದ ಜೆಡಿಎಸ್‍ನ ಕರ್ನಾಟಕ ವಿಕಾಸ ವಾಹಿನಿ ಯಾತ್ರೆಯು ರಾತ್ರಿ 3.30ಕ್ಕೆ ಚಿಕ್ಕಮಗಳೂರಿನ ಮುಗುಳವಳ್ಳಿಗೆ ಆಗಮಿಸಿತು. ಗ್ರಾಮದ ಧರ್ಮಪಾಲ ಅವರ ಮನೆಯಲ್ಲಿ ವಾಸ್ತವ್ಯ ಹೂಡಿ ಬೆಳಗ್ಗೆ ಅಲ್ಲಿಯೇ ಉಪಹಾರ ಸೇವಿಸಿದ ನಂತರ ಸಾರ್ವಜನಿಕ ಸಭೆ ನಡೆಸಿದರು.

Facebook Comments

Sri Raghav

Admin