ನೋಟ್ ಬ್ಯಾನ್ ವಿರೋಧಿಸಿ ವಿವಿಧ ಪಕ್ಷಗಳು-ಸಂಘಟನೆಗಳಿಂದ ‘ಕರಾಳ ದಿನ’ ಆಚರಣೆ

ಈ ಸುದ್ದಿಯನ್ನು ಶೇರ್ ಮಾಡಿ

Note-Ban--01

ಬೆಂಗಳೂರು, ನ.8-ಗರಿಷ್ಠ ಮುಖಬೆಲೆಯ ನೋಟುಗಳು ಅಮಾನೀಕರಣ ಗೊಳಿಸಿ ಒಂದು ವರ್ಷದ ಪೂರೈಸಿರುವ ಹಿನ್ನೆಲೆಯಲ್ಲಿ ವಿವಿಧ ರಾಜಕೀಯ ಪಕ್ಷಗಳು ಕರಾಳ ದಿನಾಚರಣೆಯನ್ನು ನಗರದಲ್ಲಿಂದು ಆಚರಿಸಿದವು.ಕಾಂಗ್ರೆಸ್, ಸಿಪಿಐ(ಎಂ), ಜೆಡಿಯು, ಜನತಾರಂಗ, ಸಮಾಜವಾದಿ ಪಕ್ಷ ಮತ್ತಿತರ ಪಕ್ಷಗಳು ಹಾಗೂ ಸಂಘಟನೆಗಳು ನೋಟು ಅಮಾನೀಕರಣ ವಿರೋಧಿಸಿ ಪ್ರತಿಭಟನೆ ನಡೆಸಿದವು. ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರಧಾನಿ ನರೇಂದ್ರಮೋದಿ ಅವರ ಪ್ರತಿಕೃತಿ ದಹಿಸಿ ಜೆಡಿಯು ಪ್ರತಿಭಟನೆ ನಡೆಸಿತು.

Note-Ban--03

ಜೆಡಿಯು ರಾಜ್ಯಾಧ್ಯಕ್ಷ ಡಾ.ಎಂ.ಪಿ.ನಾಡಗೌಡ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಜೆಡಿಯು ನೋಟು ಅಮಾನೀಕರಣ ದೇಶದ ಆರ್ಥಿಕತೆಗೆ ಅಪ್ಪಳಿಸಿದ ಸುನಾಮಿಯಾಗಿದ್ದು, ಈ ದಿನ ದೇಶದ ಆರ್ಥಿಕತೆಯ ದುಃಸ್ವಪ್ನ ದಿನ ಎಂದು ಜೆಡಿಯು ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಟೀಕಿಸಿದರು.
ಕೇಂದ್ರ ಸರ್ಕಾರ ನೋಟು ಅಮಾನೀಕರಣ ಹಾಗೂ ಜನವಿರೋಧಿ ನೀತಿಗಳನ್ನು ಸಿಪಿಐ(ಎಂ) ಖಂಡಿಸಿ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿತು. ನೋಟು ಅಮಾನೀಕರಣಗೊಂಡು ಒಂದು ವರ್ಷ ತುಂಬಿದ ಹಿನ್ನೆಲೆ ಯಲ್ಲಿ ಕರಾಳ ದಿನಾಚರಣೆ ಮಾಡಿದ ಸಿಪಿಐ(ಎಂ), ಕೇಂದ್ರ ಸರ್ಕಾರ ಜನ ವಿರೋಧಿ ನೀತಿಯನ್ನು ಅನುಸರಿಸುತ್ತಾ ಬಹುರಾಷ್ಟ್ರೀಯ ಕಂಪೆನಿಗಳ ಪರವಾದ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಪ್ರತಿಭಟನೆ ಸಂದರ್ಭದಲ್ಲಿ ಆರೋಪಿಸಲಾಯಿತು.
ಜನತಾರಂಗ ಕರ್ನಾಟಕ ಪಕ್ಷವು ಸ್ವಾತಂತ್ರ್ಯ ಉದ್ಯಾನವನದಲ್ಲಿ ನೋಟ್ ಬಂದಿ ಅಮಾನೀಕರಣ ಮತ್ತು ಜಿಎಸ್‍ಟಿಯು ಜನ ವಿರೋಧಿ ತೆರಿಗೆಯಾಗಿದ್ದು, ದೇಶಕ್ಕೆ ಕರಾಳ ದಿನವಾಗಿದೆ ಎಂದು ಪ್ರತಿಭಟನೆ ನಡೆಸಿತು.

Note-Ban--02

ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ಮಾಜಿ ಸಂಸದ ಕೋದಂಡರಾಮಯ್ಯ ಮೊದಲಾದವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ವಿರುದ್ದ ಟೀಕಾ ಪ್ರಹಾರ ನಡೆಸಲಾಯಿತು. ವಿವಿಧ ಪಕ್ಷಗಳು ಹಾಗೂ ಹಲವು ಸಂಘಟನೆಗಳು ನೋಟು ಅಮಾನೀಕರಣವನ್ನು ವಿರೋಧಿಸಿ ಕರಾಳ ದಿನ ಆಚರಿಸಿ ಪ್ರತಿಭಟನೆ ನಡೆಸಿದವು. ಸ್ವಾತಂತ್ರ್ಯ ಉದ್ಯಾನವನ ಇಂದು ಪ್ರತಿಭಟನೆಯ ಕೇಂದ್ರವೇ ಆಗಿತ್ತು.

Facebook Comments

Sri Raghav

Admin