ಪ್ಯಾರಡೈಸ್ ಪೇಪರ್ಸ್ ಸೋರಿಕೆ : ಟಾಪ್ ಲಿಸ್ಟ್ ನಲ್ಲಿ ಸನ್‍ಗ್ರೂಪ್, ಆಪಲ್ ಬೈ

ಈ ಸುದ್ದಿಯನ್ನು ಶೇರ್ ಮಾಡಿ

Paradise--0012

ನವದೆಹಲಿ, ನ.8- ದೇಶಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿರುವ ಪ್ಯಾರಡೈಸ್ ಪೇಪರ್ಸ್ ಸೋರಿಕೆಯಾದ ದಾಖಲೆಗಳಲ್ಲಿರುವ ಹೊಸ ಸಂಗತಿಗಳು ಬೆಳಕಿಗೆ ಬರುತ್ತಿವೆ. ಆ ದಾಖಲೆಗಳ ಪ್ರಕಾರ, ಅತಿ ಹೆಚ್ಚು ವಿದೇಶಿ ಕಂಪೆನಿಗಳಲ್ಲಿ ಹೂಡಿಕೆ ಮಾಡಿರುವ ಭಾರತೀಯ ಉದ್ಯಮವೆಂದರೆ ನಂದಲಾಲ್ ಖೇಮ್ಕಾ ಕುಟುಂಬ ಒಡೆತನದ ಸನ್‍ಗ್ರೂಪ್ ಆಗಿದೆ. ಅಲ್ಲದೆ, ಇದೇ ಸಂಸ್ಥೆಯ ಬರ್ಮುಡಾ ಮೂಲದ ಆಪಲ್ ಬೈ ಎರಡನೆ ಅತಿ ದೊಡ್ಡ ಗ್ರಾಹಕ ಸಂಸ್ಥೆಯಾಗಿದೆ.

ಈ ಕಂಪೆನಿಯು ಗಣಿಗಾರಿಕೆ, ವಿಮಾನಯಾನ ಹಾಗೂ ಮೂಲಭೂತ ಸೌಕರ್ಯಾಭಿವೃದ್ಧಿ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದೆ. ಖೇಮ್ಕಾ ನೇತೃತ್ವದ ಕಂಪೆನಿಯು ಬ್ರಿಟಿಷ್ ವರ್ಜಿನ್ ಐಲ್ಯಾಂಡ್ ಮತ್ತು ನ್ಯೂಜೆರ್ಸಿಯಲ್ಲಿ 120ಕ್ಕೂ ಹೆಚ್ಚು ಸಂಸ್ಥೇಗಳನ್ನು ನೋಂದಾಯಿಸಿದೆ.
ಇವುಗಳಲ್ಲಿ 17 ಸಂಸ್ಥೆಗಳಿಗೆ ನಂದಲಾಲ್‍ರನ್ನು ಫಲಾನುಭವಿ ಅಥವಾ ಅಧಿಕಾರಿ ಏಂದು ತೋರಿಸಿದ್ದರೆ, ಅವರ ಪುತ್ರರಲ್ಲಿ ಒಬ್ಬರಾದ ಶಿವ್ ವಿಕ್ರಮ್‍ರನ್ನು 104 ಸಂಸ್ಥೆಗಳಿಗೆ ಉನ್ನತಾಧಿಕಾರಿ ಎಂದು ಬಿಂಬಿಸಲಾಗಿದೆ.

ಪನಾಮಾ ಪೇಪರ್ಸ್ ಮೂಲಕ ಇಡೀ ಜಗತ್ತನ್ನೇ ನಡುಗಿಸಿದ್ದ ಅಂತಾರಾಷ್ಟ್ರೀಯ ತನಿಖಾ ಪತ್ರಕರ್ತರ ಒಕ್ಕೂಟ, ಪ್ಯಾರಡೈಸ್ ಪೇಪರ್ಸ್ ಪತ್ತೇದಾರಿ ಮೂಲಕ ವಿದೇಶಗಳಲ್ಲಿನ ಹೂಡಿಕೆ ಬಗ್ಗೆ ಮಾಹಿತಿ ಬಹಿರಂಗಗೊಳಿಸಿದ್ದು, ಗಣ್ಯಾತಿಗಣ್ಯರೂ ಸೇರಿದಂತೆ 714 ಕಾಳ ಧನಿಕರ ವಿವರಗಳನ್ನು ತಿಳಿಸಿತ್ತು.

Facebook Comments

Sri Raghav

Admin