ಬಲಪಂಥೀಯ ಮತ್ತು ಧಾರ್ಮಿಕ ಹತ್ಯೆಗಳಿಗೆ ಪಾಕ್’ನ ಐಎಸ್‍ಐ ಕುಮ್ಮಕ್ಕು

ಈ ಸುದ್ದಿಯನ್ನು ಶೇರ್ ಮಾಡಿ

Amareendar-v02

ಚಂಡಿಗಢ, ನ.8-ರಾಜ್ಯದಲ್ಲಿ ನಡೆದ ಒಂಭತ್ತು ಬಲಪಂಥೀಯ ಮತ್ತು ಧಾರ್ಮಿಕ ನಾಯಕರ ಕಗ್ಗೊಲೆಗಳಿಗೆ ಪಾಕಿಸ್ತಾನದ ಕುಖ್ಯಾತ ಬೇಹುಗಾರಿಕೆ ಸಂಘಟನೆ ಇಂಟರ್-ಸರ್ವಿಸ್ ಇಂಟೆಲಿಜೆನ್ಸ್ (ಐಎಸ್‍ಐ) ಕುಮ್ಮಕ್ಕು ನೀಡಿದೆ ಎಂದು ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಆರೋಪಿಸಿದ್ದಾರೆ.
ಬಲಪಂಥೀಯ ಮತ್ತು ಧಾರ್ಮಿಕ ಮುಖಂಡರನ್ನು ಕೊಲ್ಲುವ ಮೂಲಕ ರಾಜ್ಯದಲ್ಲಿ ಕೋಮುಗಲಭೆ ಸೃಷ್ಟಿಸಲು ಮತ್ತು ಶಾಂತಿ ಕದಡಲು ಐಎಸ್‍ಐ ಒಳಸಂಚು ರೂಪಿಸಿತ್ತು ಎಂದೂ ಅವರು ಆಪಾದಿಸಿದ್ದಾರೆ. ಪಂಜಾಬ್ ಪೊಲೀಸರಿಂದ ಬಂಧಿತರಾದ ಆಪಾದಿತರನ್ನು ಕೂಲಂಕಷ ವಿಚಾರಣೆಗೆ ಒಳಪಡಿಸಿದಾಗ ಈ ಸಂಗತಿ ಬೆಳಕಿಗೆ ಬಂದಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕುಪ್ರಸಿದ್ಧ ರೌಡಿ ಸೇರಿದಂತೆ ನಾಲ್ವರು ಬಂಧಿತರು ವಿದೇಶದಲ್ಲಿ ತರಬೇತಿ ಪಡೆದವರಾಗಿದ್ದಾರೆ. ಪಾಕಿಸ್ತಾನ ಮತ್ತು ಕೆಲವು ದೇಶಗಳಲ್ಲಿ ಇರುವ ಉಗ್ರರೊಂದಿಗೆ ಸಂಪರ್ಕ ಸಾಧಿಸಲು ರಹಸ್ಯ ಸಂಕೇತದ ಮೊಬೈಲ್ ಸಾಫ್ಟ್‍ವೇರ್‍ಗಳು ಮತ್ತು ಆ್ಯಪ್‍ಗಳನ್ನು ಬಳಸುತ್ತಿದ್ದರು. ಇವರಿಗೆ ಪಾಕ್‍ನ ಐಎಸ್‍ಐ ಬೆಂಬಲ ನೀಡಿರುವುದು ವಿಚಾರಣೆಯಿಂದ ಬಹಿರಂಗಗೊಂಡಿದೆ ಎಂದು ಸಿಂಗ್ ವಿವರಿಸಿದರು. ಜಿ ಮ್ಮಿ ಸಿಂಗ್, ಜಗ್‍ತರ್ ಸಿಂಗ್ ಜೋಹಳ್ ಅಲಿಯಾಸ್ ಜಗ್ಗಿ, ಧರ್ಮೇಂದ್ರ ಅಲಿಯಾಸ್ ಗುಗ್ನಿ ಮತ್ತು ಮತ್ತೊಬ್ಬ ಶಾರ್ಪ್ ಶೂಟರ್‍ನನ್ನು ಬಂಧಿಸಲಾಗಿದೆ. ಆರ್‍ಎಸ್‍ಎಸ್ ನಾಯಕರಾದ ಬ್ರಿಗೇಡಿಯರ್ (ನಿವೃತ್ತ) ಜಗದೀಶ್ ಗಗ್ನೇಜಾ ಮತ್ತು ರವೀಂದ್ರ ಗೋಸೈನ್ ಸೇರಿದಂತೆ ಒಂಭತ್ತು ಪ್ರಭಾವಿ ವ್ಯಕ್ತಿಗಳನ್ನು ಪಂಜಾಬ್‍ನಲ್ಲಿ ಕೊಲ್ಲಲಾಗಿತ್ತು.

Facebook Comments

Sri Raghav

Admin