ಭಾರತದ ಅರ್ಧದಷ್ಟು ಮಹಿಳೆಯರಲ್ಲಿ ರಕ್ತಹೀನತೆ…!

ಈ ಸುದ್ದಿಯನ್ನು ಶೇರ್ ಮಾಡಿ

Animea--1

ನವದೆಹಲಿ, ನ.8-ಭಾರತದಲ್ಲಿ ವನಿತೆಯರು ಗಂಭೀರ ಸ್ವರೂಪದ ಅಪೌಷ್ಠಿಕತೆ ಸಮಸ್ಯೆ ಎದುರಿಸುತ್ತಿದ್ದಾರೆ. ವಿಶ್ವದಲ್ಲಿ ಬೃಹತ್ ಸಂಖ್ಯೆಯ ರಕ್ತಹೀನತೆ ಹೊಂದಿರುವ ಮಹಿಳೆಯರ ದೇಶವೆಂದು ಒಂದೆಡೆ ಗುರುತಿಸಲ್ಪಟ್ಟಿದ್ದರೆ ಇನ್ನೊಂದೆಡೆ ಸ್ಥೂಲಕಾಯಕ್ಕೆ ಸಂಬಂಧಪಟ್ಟ ರೋಗಗಳು ಹೆಚ್ಚಾಗಿ ಇಲ್ಲಿನ ಸ್ತ್ರೀಯರನ್ನು ಕಾಡುತ್ತಿದೆ ಎಂದು ವರದಿಯೊಂದು ತಿಳಿಸಿದೆ. ನೂತನ ಜಾಗತಿಕ ಪೌಷ್ಠಿಕಾಂಶ ವರದಿ-2017ರಲ್ಲಿ ಭಾರತದ 15 ರಿಂದ 49 ವಯೋಮಾನದ ಮಹಿಳೆಯರು ರಕ್ತಹೀನತೆ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ತಿಳಿಸಿದೆ. ಇದು ವಿಶ್ವದಲ್ಲೇ ಅತ್ಯಧಿಕ ಪ್ರಮಾಣದ್ದು ಎಂದು ವಿಶ್ಲೇಷಿಸಲಾಗಿದೆ. ಕಳೆದ ವರ್ಷದ ವರದಿಯಲ್ಲಿ ಭಾರತದಲ್ಲಿ ಶೇ.48ರಷ್ಟು ರಕ್ತಹೀನತೆಯ ವನಿತೆಯರಿದ್ದರು.

ಈ ವಯೋಮಾನದವರಲ್ಲಿ ಭಾರತದಲ್ಲೇ ಅಧಿಕ ಪ್ರಮಾಣದ ರಕ್ತದ ಕೊರತೆ ಕಂಡುಬಂದಿದೆ. ನಂತರದ ಸ್ಥಾನದಲ್ಲಿ ಚೀನಾ, ಪಾಕಿಸ್ತಾನ, ನೈಜೀರಿಯಾ ಮತ್ತು ಇಂಡೋನೆಷ್ಯಾ ದೇಶಗಳಿವೆ. ಒಟ್ಟು 140 ದೇಶಗಳ ವಿವರಗಳನ್ನು ಈ ವರದಿಯಲ್ಲಿ ತಿಳಿಸಲಾಗಿದೆ.

Facebook Comments

Sri Raghav

Admin