ಮಾದಕ ವಸ್ತುಗಳು ಮಾರುತಿದ್ದ ನೈಜಿರಿಯಾ ಪ್ರಜೆ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

drugs

ಬೆಂಗಳೂರು, ನ.8-ಆಫ್ರಿಕಾ ಮೂಲದ ಪ್ರಜೆಯೊಬ್ಬನನ್ನು ಬಂಧಿಸಿರುವ ಸುದ್ದಗುಂಟೆಪಾಳ್ಯ ಠಾಣೆ ಪೊಲೀಸರು ಆತ ಮಾರಾಟ ಮಾಡುತ್ತಿದ್ದ 25 ಗ್ರಾಂ ಕೋಕೇನ್ ಮಾದಕ ವಸ್ತುವನ್ನು ವಶಪಡಿಸಿಕೊಂಡಿದ್ದಾರೆ. ನೈಜಿರಿಯಾದ ಇನುಗು ರಾಜ್ಯದ ಭುಕ್ವು ಗಾಡ್ವಿನ್ (36) ಬಂಧಿತ ಆರೋಪಿ. ಈತ ಹೊಸಕೋಟೆ ರಸ್ತೆಯ ಮೇಡಹಳ್ಳಿಯಲ್ಲಿ ವಾಸವಾಗಿದ್ದ. ಬನ್ನೇರುಘಟ್ಟ ರಸ್ತೆಯಲ್ಲಿ ಗಾಡ್ವಿನ್ ಕೋಕೇನ್ ಮಾರಾಟ ಮಾಡಲು ಹವಣಿಸುತ್ತಿದ್ದಾಗ ಪೊಲೀಸರು ಬಂಧಿಸಿದ್ದಾರೆ.

ಎಡ್ವಿನ್ 2014ರಲ್ಲಿ ನೈಜಿರಿಯಾದಿಂದ ಮುಂಬೈಗೆ ಬಟ್ಟೆ ವ್ಯಾಪಾರ ಮಾಡಲು ಬಂದಿದ್ದ. ನಂತರ ಈತ ಬೆಂಗಳೂರು ಹೊರ ವಲಯದ ಒಂಟಿ ಮನೆಯಲ್ಲಿ ವಾಸವಾಗಿದ್ದುಕೊಂಡು ರಹಸ್ಯವಾಗಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ. ಅಲ್ಲದೇ ಶ್ರೀಮಂತರ ಮಕ್ಕಳು ಪಾಲ್ಗೊಳ್ಳುವ ಪಾರ್ಟಿಗಳಿಗೂ ಕೋಕೇನ್‍ನನ್ನು ಪೂರೈಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.ಬನ್ನೇರುಘಟ್ಟ ರಸ್ತೆಯಲ್ಲಿ ಮಾದಕ ವಸ್ತು ಮಾರಾಟ ಮಾಡಲು ಬಂದಿದ್ದ ಆರೋಪಿಯನ್ನು ನಿಖರ ಸುಳಿವಿನ ಮೇರೆಗೆ ಸುದ್ದಗುಂಟೆಪಾಳ್ಯ ಪೊಲೀಸರು ಬಂಧಿಸಿ, ಕೋಕೇನ್ ವಶಪಡಿಸಿಕೊಂಡಿದ್ದಾರೆ. ಆಗ್ನೇಯ ವಿಭಾಗದ ಡಿಸಿಪಿ ಡಾ.ಬೋರಲಿಂಗಯ್ಯ ಮಾರ್ಗದರ್ಶನದಲ್ಲಿ, ಮೈಕೋಲೇಔಟ್ ಉಪ ವಿಭಾಗದ ಎಸಿಪಿ ಕರಿಬಸವನಗೌಡ ನೇತೃತ್ವದಲ್ಲಿ ಇನ್ಸ್‍ಪೆಕ್ಟರ್ ಬಿ.ಪಿ.ಗಿರೀಶ್ ಮತ್ತು ಠಾಣಾ ಸಿಬ್ಬಂದಿ ಆರೋಪಿಯನ್ನು ಬಂಧಿಸಿದರು.

Facebook Comments

Sri Raghav

Admin