ಮುಗಿಯದ ಕಾಮಗಾರಿ, ತಪ್ಪದ ಪರದಾಟ, ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಗರಂ

ಈ ಸುದ್ದಿಯನ್ನು ಶೇರ್ ಮಾಡಿ

piri
ಪಿರಿಯಾಪಟ್ಟಣ, ನ.8-ರಸ್ತೆ ಕಾಮಗಾರಿ ಹೆಸರಿನಲ್ಲಿ ಕಳೆದ ಎಂಟು ತಿಂಗಳಿನಿಂದ ವಿದ್ಯುತ್, ಕುಡಿಯುವ ನೀರು ಸೇರಿದಂತೆ ಹಲವಾರು ಮೂಲಭೂತ ಸೌಲಭ್ಯಗಳ ಕೊರತೆಯಿಂದ ಬೇಸತ್ತು ಸಾರ್ವಜನಿಕರು ಅಧಿಕಾರಿಗಳನ್ನು ತರಾಟೆಗೆ ತೆಗೆದಕೊಂಡ ಪ್ರಸಂಗ ನಡೆಯಿತು. ಪಟ್ಟಣದ ಶ್ರೀಬಸವೇಶ್ವರ ವೃತ್ತದಿಂದ ಆನೆಚೌಕೂರು ಗೇಟ್ ವರೆಗೆ 19 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಪ್ರಗತಿಯಲ್ಲಿದ್ದು, ಆನೆಚೌಕೂರು ಗೇಟ್‍ನಿಂದ ಸೆಂಟ್ ಮೇರೀಸ್ ಆಸ್ಪತ್ರೆವರೆಗೆ ಕಳೆದ ಏಳು ತಿಂಗಳ ಹಿಂದೆಯೇ ರಸ್ತೆ ಕಾಮಗಾರಿ ಮುಗಿದಿದೆ. ಆದರೆ, ಸೆಂಟ್ ಮೇರೀಸ್ ಆಸ್ಪತ್ರೆಯಿಂದ ಶ್ರೀಬಸವೇಶ್ವರ ವೃತ್ತದವರೆಗೆ ಕಳೆದ ಏಳು ತಿಂಗಳುಗಳ ಹಿಂದೆಯೇ ಕಾಮಗಾರಿ ಆರಂಭಿಸಿ ವಿದ್ಯುತ್ ಕಂಬಗಳ ಅಳವಡಿಕೆ ಕಾಮಗಾರಿ ಮುಗಿದಿದೆ. ರಸ್ತೆಯ ಆಜುಬಾಜಿನಲ್ಲಿ ಚರಂಡಿ ಮತ್ತು ಸಣ್ಣ ಸೇತುವೆ ಕಾಮಗಾರಿ ಲೋಕೋಪಯೋಗಿ ಇಲಾಖೆಯಿಂದ ನಡೆಯುತ್ತಿದೆ. ಇದರ ಕಾರ್ಯನಿರ್ವಹಣೆಯನ್ನು ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಎಸ್.ಪ್ರಕಾಶ್ ಜವಾಬ್ದಾರಿ ವಹಿಸಿದ್ದಾರೆ.

ನಡೆಯುತ್ತಿರುವ ಚರಂಡಿ ಮತ್ತು ಸೇತುವೆ ಕಾಮಗಾರಿ ಅವೈಜ್ಞಾನಿಕ ಮತ್ತು ಕಳಪೆಯಿಂದ ಕೂಡಿದ ಪರಿಣಾಮ ಮುಂದಿನ ದಿನಗಳಲ್ಲಿ ವಾಸದ ಮನೆಗಳು ಹಾಗೂ ಖಾಲಿ ನಿವೇಶನಗಳು, ಕೆರೆ-ಕಟ್ಟೆಗಳಿಂದ ಹರಿಯುವ ನೀರಿಗೆ ತೊಂದರೆಯಾಗುವುದರಿಂದ ಸಂಬಂಧಪಟ್ಟ ಅಧಿಕಾರಿಗಳಿಗೆ ಒಂದಲ್ಲ ಒಂದು ರೀತಿಯಲ್ಲಿ ಪ್ರತಿಭಟನೆಗಳು ನಡೆದುಕೊಂಡುಬರುತ್ತಿವೆ. ರಸ್ತೆಯನ್ನು ಸಂಪೂರ್ಣವಾಗಿ ಹದಗೆಡಿಸಿರುವುದರಿಂದ ಇಲ್ಲಿ ಓಡಾಡುವ ಸಾವಿರಾರು ವಿದ್ಯಾರ್ಥಿಗಳು ಮತ್ತು ವಾಹನ ಸವಾರರು ಗುತ್ತಿಗೆದಾರನಿಗೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಹಿಡಿ ಶಾಪಹಾಕುತ್ತಿದ್ದಾರೆ. ಜಯಸ್ವಾಮಿ, ಪರಿಸರ ಹೋರಾಟಗಾರ ಕೆ.ಎನ್.ಸೋಮಶೇಖರ್, ದಸಂಸ ಮುಖಂಡ ಅಣ್ಣಯ್ಯ, ಆರ್.ಡಿ.ಮಹದೇವ್, ಸಹಾಯಕ ಎಂಜಿನಿಯರ್ ದಿನೇಶ್, ವಾಟರ್‍ಮನ್ ರಮೇಶ್, ಮತ್ತಿತರರು ಹಾಜರಿದ್ದರು.

Facebook Comments