ಮೆಡಿಟರೇನಿಯನ್ ಸಮುದ್ರದಲ್ಲಿ 26 ಬಾಲಕಿಯರ ಶವ ಪತ್ತೆ…!

ಈ ಸುದ್ದಿಯನ್ನು ಶೇರ್ ಮಾಡಿ

Dead-Body--02

ರೋಮ್, ನ.8-ಮೆಡಿಟರೇನಿಯನ್ ಸಮುದ್ರ ಮೃತ್ಯಕೂಪವಾಗಿ ಪರಿಣಮಿಸಿದ್ದು, 26 ಯುವತಿಯರು ಮತ್ತು ಬಾಲಕಿಯರ ಶವಗಳು ಪತ್ತೆಯಾಗಿವೆ. ಅವರ ಸಾವಿನ ಕುರಿತು ಇಟಲಿ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. 14 ರಿಂದ 19 ವರ್ಷದ ಬಾಲಕಿಯರು ಮತ್ತು ಹದಿಹರೆಯದವರು ನೈಜರ್ ಮತ್ತು ನೈಜೀರಿಯಾದ ವಲಸಿಗರೆಂದು ಶಂಕಿಸಲಾಗಿದೆ. ಅವರು ಕಳೆದ ವಾರ ಲಿಬಿಯಾದಿಂದ ಯುರೋಪ್‍ಗೆ ಅಪಾಯಕಾರಿ ಸಮುದ್ರ ಮಾರ್ಗದಲ್ಲಿ ಪ್ರಯಾಣ ಕೈಗೊಂಡಿರಬೇಕೆಂದು ಹೇಳಲಾಗಿದೆ. ಸಣ್ಣ ರಬ್ಬರ್ ದೋಣಿಯೊಂದರ ಸಮೀಪ ಅವರ ಶವಗಳು ಪತ್ತೆಯಾಗಿವೆ.

ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅವರಿಗೆ ಹಿಂಸೆ ನೀಡಲಾಗಿದೆಯೇ ಅಥವಾ ಲೈಂಗಿಕ ದೌರ್ಜನ್ಯ ಎಸಗಲಾಗಿದೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಕಳೆದ ವಾರಾಂತ್ಯದಲ್ಲಿ ನಡೆದ ಮೂರು ಪ್ರತ್ಯೇಕ ರಕ್ಷಣಾ ಕಾರ್ಯಾಚರಣೆಗಳಲ್ಲಿ 400ಕ್ಕೂ ಹೆಚ್ಚು ಮಂದಿಯನ್ನು ರಕ್ಷಿಸಲಾಗಿದೆ. ಇವರಲ್ಲಿ 90 ಮಹಿಳೆಯರು ಮತ್ತು 52 ಬಾಲಕಿಯರು.  ಈ ವರ್ಷ2,839 ಮಂದಿ ಜಲಸಮಾಧಿ: ಈ ವರ್ಷ ಮೆಡಿಟರೇನಿಯನ್ ಸಮುದ್ರ ದಾಟಿ ಯುರೋಪ್‍ಗೆ ಸೇರಿ ಹೊಸ ಜೀವನ ಆರಂಭಿಸುವ ತವಕದಲ್ಲಿದ್ದ 2,839 ಮಂದಿ ದೋಣಿ ದುರಂತಗಳಲ್ಲಿ ಜಲಸಮಾಧಿಯಾಗಿದ್ದಾರೆ. 1,50,982 ವಲಸಿಗರು ಸುರಕ್ಷಿತವಾಗಿ ಯುರೋಪ್ ತೀರಗಳನ್ನು ಸೇರಿದ್ದಾರೆ ಎಂದು ಅಂತಾರಾಷ್ಟ್ರೀಯ ವಲಸಿಗರ ಸಂಘಟನೆ ಮಾಹಿತಿ ನೀಡಿದೆ.

Facebook Comments

Sri Raghav

Admin