ರೈಲಿಗೆ ಸಿಲುಕಿ ಅಪರಿಚಿತ ವ್ಯಕ್ತಿ ಆತ್ಮಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ
ಸಾಂದ್ರರ್ಭಿಕ ಚಿತ್ರ
ಸಾಂದ್ರರ್ಭಿಕ ಚಿತ್ರ

ಮೈಸೂರು, ನ.8-ಅಪರಿಚಿತ ವ್ಯಕ್ತಿಯೊಬ್ಬರ ಶವ ಇಂದು ಬೆಳಗ್ಗೆ ನಗರದ ರೈಲ್ವೆ ಗೇಟ್ ಬಳಿ ಪತ್ತೆಯಾಗಿದೆ. ಮೈಸೂರು ಕಡೆಗೆ ಬರುತ್ತಿದ್ದ ರೈಲಿಗೆ ಅಪರಿಚಿತ ವ್ಯಕ್ತಿ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಸುಮಾರು 5 ರಿಂದ 6 ಅಡಿ ಎತ್ತರವಿರುವ ಅಪರಿಚಿತ ವ್ಯಕ್ತಿ ನೀಲಿ ಬಣ್ಣ ಶರ್ಟ್ ಹಾಗೂ ಪ್ಯಾಂಟನ್ನು ಧರಿಸಿದ್ದಾನೆ. ಇಂದು ಬೆಳಗ್ಗೆ ರೈಲ್ವೆ ಹಳಿ ಬಳಿ ಶವವನ್ನು ಕಂಡ ಸಾರ್ವಜನಿಕರು ಪೊಲೀಸರಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.

Facebook Comments

Sri Raghav

Admin