ವಿಯೆಟ್ನಾಂ ಭೀಕರ ಚಂಡಮಾರುತಕ್ಕೆ 70ಕ್ಕೂ ಹೆಚ್ಚು ಸಾವು

Vietnam-04

ಡನಾಂಗ್, ನ.8-ವಿಯೆಟ್ನಾಂನ ದಕ್ಷಿಣ-ಮಧ್ಯ ಕರಾವಳಿಯಲ್ಲಿ ಭೀಕರ ಚಂಡಮಾರುತ ಮತ್ತು ಭಾರೀ ಮಳೆಯಿಂದಾಗಿ ಸತ್ತವರ ಸಂಖ್ಯೆ 70ಕ್ಕೇರಿದೆ. ನೈಸರ್ಗಿಕ ವಿಕೋಪದಲ್ಲಿ ಅನೇಕರು ನಾಪತ್ತೆಯಾಗಿದ್ದಾರೆ. ವಿಯೆಟ್ನಾಂನ ಕೆಲವು ಪ್ರಾಂತ್ಯಗಳ ಮೇಲೆ ಇತ್ತೀಚೆಗೆ ಡ್ರಾಮೆ ಎಂಬ ವಿನಾಶಕಾರಿ ಚಂಡಮಾರುತ ಅಪ್ಪಳಿಸಿತ್ತು. ಇದರಿಂದಾಗಿ ಬಿರುಗಾಳಿಯಿಂದ ಕೂಡಿದ ಭಾರೀ ಮಳೆಯಿಂದಾಗಿ ಪ್ರವಾಹವುಂಟಾಗಿ ಸಾವು-ನೋವು ಸಂಭವಿಸಿತು. ಈವರೆಗೆ 70ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಎಂದು ವಿಪತ್ತು ನಿರ್ವಹಣೆ ಅಧಿಕಾರಿಗಳು ಹೇಳಿದ್ದಾರೆ.

Vietnam-02

ನೆರೆ ಹಾವಳಿಯಿಂದ 100ಕ್ಕೂ ಅಧಿಕ ಮನೆಗಳು ಸಂಪೂರ್ಣ ನಾಶವಾಗಿದ್ದು, ನೂರಾರು ವಸತಿಗೃಹಗಳಿಗೆ ಹಾನಿಯಾಗಿವೆ. ಅಪಾರ ಪ್ರಮಾಣದ ಬೆಳೆ ನಷ್ಟವಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮುಂದಿನ ವಾರ ಏಷ್ಯಾ-ಪೆಸಿಫಿಕ್ ಆರ್ಥಿಕ ಸಹಕಾರ (ಎಪಿಇಸಿ) ಶೃಂಗಸಭೆಗೆ ವಿಯೆಟ್ನಾಂ ಅತಿಥ್ಯ ವಹಿಸಲಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಚೀನಾ ಅಧ್ಯಕ್ಷ ಕ್ಸಿ ಜಿನ್‍ಪಿಂಗ್, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮತ್ತು ಇತರ ವಿಶ್ವನಾಯಕರು ಭಾಗವಹಿಸಲಿದ್ದಾರೆ.

Vietnam-01

Facebook Comments

Sri Raghav

Admin