5 ವರ್ಷದಲ್ಲಿ ಶೇ.80ರಷ್ಟು ಹೆಚ್ಚಾಯ್ತು ಹಿಮಾಚಲ ಪ್ರದೇಶ ಶಾಸಕರ ಸಂಪತ್ತು..!

ಈ ಸುದ್ದಿಯನ್ನು ಶೇರ್ ಮಾಡಿ

assets-02

ಶಿಮ್ಲಾ, ನ.8-ಗುರುವಾರ ನಡೆಯಲಿರುವ ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಮರು ಆಯ್ಕೆ ಬಯಸಿರುವ 60 ಶಾಸಕರ ಸಂಪತ್ತು ಕಳೆದ ಐದು ವರ್ಷಗಳಲ್ಲಿ ಗಣನೀಯವಾಗಿ ಹೆಚ್ಚಾಗಿರುವುದು ಅಧಿಕೃತ ಅಂಕಿ-ಅಂಶಗಳ ವಿಶ್ಲೇಷಣೆಯಿಂದ ತಿಳಿದುಬಂದಿದೆ. 60 ಶಾಸಕರ ಒಟ್ಟು ಸಂಪತ್ತು 314.3 ಕೋಟಿ ರೂ.ಗಳಿಂದ ಒಂದೇ ವರ್ಷದಲ್ಲಿ 566.9 ಕೋಟಿ ರೂ.ಗಳಿಗೆ ಏರಿದ್ದು, ಶೇ.80ರಷ್ಟು ಹೆಚ್ಚಾಗಿದೆ. ಅಭ್ಯರ್ಥಿಗಳು ನಾಮಪತ್ರಗಳ ಸಲ್ಲಿಕೆ ವೇಳೆ ಲಗತ್ತಿಸಿರುವ ಪ್ರಮಾಣಪತ್ರದಲ್ಲಿ ಈ ಅಂಕಿ ಅಂಶಗಳು ಅಡಕವಾಗಿವೆ.

ಅಸೋಸಿಯೇಷನ್ ಫಾರ್ ಡೆಮೊಕ್ರಾಟಿಕ್ ರಿಫಾಮ್ರ್ಸ್(ಎಡಿಆರ್) ಇದನ್ನು ವಿಶ್ಲೇಷಿಸಿದೆ.  ಹೊಸ ಆಸ್ತಿ ಖರೀದಿಸದಿದ್ದರೂ, ಸಂಪತ್ತಿನ ಮೌಲ್ಯ ಹೆಚ್ಚಬಹುದು. ನಮ್ಮ ಬಹುತೇಕ ಆಸ್ತಿಗಳು ಜಮೀನಿನ ರೂಪದಲ್ಲಿವೆ. ಭೂಮಿಯ ಮೌಲ್ಯ ಹೆಚ್ಚಾದಂತೆಲ್ಲಾ ಸಂಪತ್ತಿನ ಬೆಲೆಯೂ ಸಹಜವಾಗಿ ವೃದ್ಧಿಸುತ್ತದೆ ಎಂದು ಶಾಸಕರು ಸಮರ್ಥಿಸಿಕೊಂಡಿದ್ದಾರೆ.

Facebook Comments

Sri Raghav

Admin