ಅವೈಜ್ಞಾನಿಕ ರಸ್ತೆ ಕಾಮಕಾರಿ ನಡೆಸಿತ್ತಿದ್ದ ಅಧಿಕಾರಿಗಳಿಗೆ ನಗರಸಭೆ ತರಾಟೆ

ಈ ಸುದ್ದಿಯನ್ನು ಶೇರ್ ಮಾಡಿ

nanja
ನಂಜನಗೂಡು, ನ.9- ನಗರದಲ್ಲಿ ನಡೆಯುತ್ತಿರುವ ಅವೈಜ್ಞಾನಿಕ ರಸ್ತೆ ಕಾಮಕಾರಿ ಬಗ್ಗೆ ಗಂಭಿರವಾಗಿ ಪರಿಗಣಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ನಗರಸಭೆ ತರಾಟೆಗೆ ತೆಗೆದುಕೊಂಡಿರುವ ಘಟನೆ ನಡೆದಿದೆ. ಇಲ್ಲಿನ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ನಗರಸಭಾಧ್ಯಕ್ಷೆ ಪುಷ್ಪಲತಾ ಕಮಲೇಶ್, ಉಪಾಧ್ಯಕ್ಷ ಪ್ರದೀಪ್ ಕುಮಾರ್, ಸ್ಥಾಯಿಸಮಿತಿ ಅಧ್ಯಕ್ಷ ಚಂದ್ರಶೇಖರ್ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖಾ ಅಧಿಕಾರಿಗಳ ಸಭೆ ನಡೆಯಿತು. ಸಭೆಯಲ್ಲಿ ನಗರಸಬಾ ಸದಸ್ಯರಾದ ಸಿ.ಎಂ.ಶಂಕರ್, ಕೆ.ಜಿ.ಆನಂದ್ ಖಾಲಿದ್ ಅಹಮ್ಮದ್, ಗಿರೀಶ್ ಕುಮಾರ್, ಮಂಗಳಾ ಮುಂತಾದವರು ಮಾತನಾಡಿ, ನಗರದಲ್ಲಿ 2 ಮುಖ್ಯವಾದ ರಸ್ತೆಗಳ ಕಾಮಗಾರಿಗಳು ಅವೈಜ್ಞಾನಿಕವಾಗಿ ಕಾಮಗಾರಿ ನಡೆಯುತ್ತಿದೆ. ಸಂಬಂಧಪಟ್ಟ ಗುತ್ತಿಗೆದಾರರು ಮತ್ತು ಅಧಿಕಾರಿಗಳು ತಮಗೆ ಇಷ್ಟಬಂದ ಹಾಗೆ ಕಾಮಗಾರಿ ಮಾಡುತ್ತಿದ್ದು , ಇದರಿಂದ ಸಾರ್ವಜನಿಕರಿಗೆ ಮತ್ತು ನಿವಾಸಿಗಳಿಗೆ ತೀವ್ರತೊಂದರೆಯಾಗಿದೆ. ಇಲ್ಲಿನ ಕೆಲಸ ನಿರ್ವಹಿಸುತ್ತೀರುವವರು ಅಂದಾಜು ಪಟ್ಟಿಕಾಮiಗಾರಿಗಳ ವಿವರಗಳನ್ನು ನಗರಸಭೆಗಳಾಗಲಿ ಅಥವಾ ಕಾಮಗಾರಿ ನಡೆಯುವ ಸ್ಥಳಗಳಲ್ಲಿ ಬೋರ್ಡ್‍ಗಳನ್ನು ಹಾಕಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.

ನಗರಸಭೆ ಆಯುಕ್ತ ವಿಜಯ ಮಾತಾನಾಡಿ, ನಗರಸಭಾ ವ್ಯಾಪ್ತಿಯಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿಗಳ ಬಗ್ಗೆ ನಗರಸಭೆಗೆ ಯಾವುದೆ ಮಾಹಿತಿ ನೀಡಿಲ್ಲ. ನಗರಸಭೆಯ ಚುನಾಯಿತ ಪ್ರತಿನಿಧಿಗಳನ್ನಾಗಲಿ ಮತ್ತು ಇಲ್ಲಿನ ಅಧಿಕಾರಿಗಳನ್ನಾಗಲಿ ಯಾವುದೇ ಮಾಹಿತಿ ನೀಡದೆ ಸಂಪೂರ್ಣ ತಿರಸ್ಕರಿಸಿದ್ದಾರೆ ಎಂದರು. ಲೋಕೋಪಯೋಗಿ ಅಧಿಕಾರಿಗಳಾದ ವಿಕಾಶ್ ಜಿ.ಆರ್, ಮದನ್ ಮೋಹನ್, ಲಿಂಗರಾಜು, ಒಳಚರಂಡಿ ಅಧಿಕಾರಿ ಚಿನ್ನಸ್ವಾಮಿ ಮುಂತಾದವರು ಮಾತಾನಾಡಿ, ನಗರಸಭೆ ಅಧ್ಯಕ್ಷರು ಹಾಗೂ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಉತ್ತಮ ಕೆಲಸ ಮಾಡುವ ಭರವಸೆ ನೀಡಿದರು. ಸಭೆಯಲ್ಲಿ ಸದಸ್ಯರಾದ ಗಿರೀಶ್ ಕುಮಾರ್, ಮಟನ್ ಬಾಬು, ಖಾಲಿದ್, ಅಹಮದ್, ಇಂದ್ರಾಣಿ ದೇವರಾಜ್, ಖಾಲಿದ್, ವಿಜಯಾಂಬಿಕೆ, ರಾಮಕೃಷ್ಣ, ದೊಡ್ಡಮಾದಯ್ಯ ಇದ್ದರು.

Facebook Comments

Sri Raghav

Admin