ಆಹ್ವಾನ ನೀಡದಕ್ಕೆ ತಾಪಂ ಸಭೆಯನ್ನು ಬಹಿಷ್ಕರಿಸಿದ ಮಾಧ್ಯಮದವರು

ಈ ಸುದ್ದಿಯನ್ನು ಶೇರ್ ಮಾಡಿ

t-nara
ತಿ.ನರಸೀಪುರ, ನ.9- ಸಭೆಗೆ ಮಾಧ್ಯಮದವರನ್ನು ಆಹ್ವಾನಿಸದೆ ಬೇಜಾವಬ್ದಾರಿ ಪ್ರದರ್ಶನ ಮಾಡಿದ ತಾ.ಪಂ ಇಒ ಬಿ.ಎಸ್.ರಾಜುರವರನ್ನು ತೀವ್ರ ತರಾಟೆಗೆ ತೆಗೆದುಕೊಂಡ ತಾ.ಪಂ ಸದಸ್ಯರು ಸಭೆಯನ್ನು ಬಹಿಷ್ಕರಿಸಿ ಹೊರ ನಡೆದ ಪ್ರಸಂಗ ನಡೆಯಿತು. ಸಭೆಯ ಮೊದಲಿಗೆ ಮಾತನಾಡಿದ ಸದಸ್ಯ ಮೂಗೂರು ಚಂದ್ರಶೇಖರ್, ಸಭೆಗೆ ಪರ್ತಕರ್ತರು ಹಾಜರಿಲ್ಲ, ಅವರಿಗೆ ಆಹ್ವಾನ ನೀಡಿದ್ದೀರ ಎಂದು ಇಒ ಬಿ.ಎಸ್.ರಾಜುರವರನ್ನು ಪ್ರಶ್ನಿಸಿದರು. ಸಭೆಗೆ ಆಗಮಿಸುವಂತೆ ಎಲ್ಲಾ ಪತ್ರಕರ್ತರಿಗೂ ಮಾಹಿತಿ ನೀಡಲಾಗಿದೆಎಂದು ಇಒ ತಿಳಿಸುತ್ತಿದ್ದಂತೆ ಸಭೆ ನಡೆಯುತ್ತಿರುವ ವಿಷಯ ತಿಳಿದು ಸ್ಥಳಕ್ಕಾಗಮಿಸಿ ಪರ್ತಕರ್ತರು ಸಭೆ ಕುರಿತು ನಮಗೆ ಮಾಹಿತಿ ನೀಡಿಲ್ಲ ಎಂದು ತಿಳಿಸಿದರು.

ಪರ್ತಕರ್ತರ ಉತ್ತರದಿಂದ ಕೆಂಡಮಂಡಲರಾದ ತಾ.ಪಂ ಸದಸ್ಯರು ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳುವ ಸಲುವಾಗಿ ಮಾಧ್ಯಮದವರಿಗೆ ಮಾಹಿತಿ ನೀಡದೆ ಗೌಪ್ಯವಾಗಿ ಸಭೆ ನಡೆಸುವುದು ತಾ.ಪಂ ಕಾರ್ಯನಿರ್ವಹಣಾಧಿಕಾರಿಯಾದ ನಿಮಗೆ ಶೋಭೆಯಲ್ಲ. ಸಭೆಯಲ್ಲಿ ಚರ್ಚೆಯಾಗುವ ಎಲ್ಲಾ ವಿಷಯಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ದೊರಕಬೇಕು ಎಂದು ಇಒ ವಿರುದ್ದ ಹರಿಹಾಯ್ದರು.
ಈ ವೇಳೆ ಸ್ಥಳದಲ್ಲಿದ್ದ ಪರ್ತಕರ್ತರು ಇಒ ವಿರುದ್ಧ ಬೇಸರ ವ್ಯಕ್ತಪಡಿಸಿ ಸಭೆಯಿಂದ ಹೊರ ನಡೆಯಲಾಗಿ ತಾ.ಪಂ ಅಧ್ಯಕ್ಷ ಸಿ.ಚಾಮೇಗೌಡ, ಸದಸ್ಯ ಕುಕ್ಕೂರು ಗಣೇಶ್ ಪರ್ತಕರ್ತರನ್ನು ಸಮಾಧಾನ ಪಡಿಸಲು ಪ್ರಯತ್ನಪಟ್ಟರು ಯಾವುದೇ ಪ್ರಯೋಜವಾಗಲಿಲ್ಲ. ಇದರಿಂದ ಸಹಜವಾಗಿಯೇ ಬೇಸರಗೊಂಡ ಸದಸ್ಯರಾದ ರಮೇಶ್, ಚಂದ್ರಶೇಖರ್, ಕುಕ್ಕೂರು ಗಣೇಶ್ ಹಾಗೂ ಇನ್ನಿತರ ಸದಸ್ಯರು ಮುಂದಿನ ದಿನಗಳಲ್ಲಿ ಮಾಧ್ಯಮದವರಿಗೆ ಮಾಹಿತಿ ನೀಡಿಸಭೆ ನಡೆಸುವಂತೆ ಇಒ ರಾಜುಗೆ ಎಚ್ಚರಿಕೆ ನೀಡಿ ಸಭೆಯನ್ನು ಬಹಿಷ್ಕರಿಸಿ ಹೊರ ನಡೆದರು.  ಉಪಾಧ್ಯಕ್ಷೆ ಸುಂದ್ರಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ರಾಮಲಿಂಗಯ್ಯ, ಎಡಿ ಪ್ರೇಮ್ ಕುಮಾರ್, ಸದಸ್ಯರಾದ ಸಾಜಿದ್ ಅಹಮ್ಮದ್, ಶಿವಮ್ಮ, ಚಿಕ್ಕತಾಯಮ್ಮ, ರಂಗಸ್ವಾಮಿ, ಲೋಲಾಕ್ಷಿ, ಅಧಿಕಾರಿಗಳಾದ ಜಿ.ಪಂ ಎಇಇ ಸಿದ್ದರಾಜು, ಸಿಡಿಪಿಒ ಬಸವರಾಜು, ಸಮಾಜ ಕಲ್ಯಾಣಧಿಕಾರಿ ದಿವಾಕರ್ ಮತ್ತಿತರರಿದ್ದರು.

Facebook Comments

Sri Raghav

Admin