ಕ್ಯಾಂಟರ್ ಪಲ್ಟಿಯಿಂದ ಬಯಾಲಾಯ್ತು ಮಾಂಸದ ಕಳ್ಳ ಸಾಗಣೆ ದಂಧೆ

ಈ ಸುದ್ದಿಯನ್ನು ಶೇರ್ ಮಾಡಿ

davana

ದಾವಣಗೆರೆ, ನ.9- ಬೆಂಗಳೂರಿನಿಂದ ಹುಬ್ಬಳ್ಳಿಗೆ ದನದ ಮಾಂಸ ಕಳ್ಳ ಸಾಗಣೆ ಮಾಡುತ್ತಿದ್ದ ಕ್ಯಾಂಟರ್ ಪಲ್ಟಿ ಹೊಡೆದು ಸುಮಾರು 8-10 ಕ್ವಿಂಟಾಲ್ ಮಾಂಸ ರಸ್ತೆ ಮೇಲೆ ಚೆಲ್ಲಾಡಿರುವ ಘಟನೆ ನಗರದ ಜಿಲ್ಲಾ ಪಂಚಾಯತ್ ಕಚೇರಿ ಎದುರು ಮುಖ್ಯರಸ್ತೆಯಲ್ಲಿ ನಡೆದಿದೆ.
ಬೆಂಗಳೂರಿನ ಅಯೂಬ್ ಎಂಬುವರಿಂದ ಖರೀದಿಸಿದ ಮಾಂಸವನ್ನು ಚಾಲಕ ಗಫೂರ್ ಡ್ರಮ್‍ಗಳಲ್ಲಿ ತುಂಬಿ ಕ್ಯಾಂಟರ್‍ನಲ್ಲಿಟ್ಟು ಅದರ ಮೇಲೆ ದೊಡ್ಡಗಾತ್ರದ ಐಸ್‍ಗಡ್ಡೆಗಳನ್ನು ಇರಿಸಿ ಹುಬ್ಬಳ್ಳಿಗೆ ಸಾಗಿಸುತ್ತಿದ್ದ. ಮುಖ್ಯರಸ್ತೆಯಲ್ಲಿರುವ ಜಿಲ್ಲಾ ಪಂಚಾಯತ್ ಕಚೇರಿ ಬಳಿ ಕ್ಯಾಂಟರ್ ಬಂದಾಗ ಎದುರಿನಿಂದ ಬಂದ ಎಮ್ಮೆಯನ್ನು ತಪ್ಪಿಸಲು ಬ್ರೇಕ್ ಹಾಕಿದ್ದು, ನಿಯಂತ್ರಣ ತಪ್ಪಿ ಕ್ಯಾಂಟರ್ ಪಲ್ಟಿಹೊಡೆದಿದೆ.
ಆಗ ಮಾಂಸವೆಲ್ಲ ರಸ್ತೆಯಲ್ಲಿ ಚೆಲ್ಲಿ ರಹಸ್ಯ ಸಾಗಾಣಿಕೆ ಕೃತ್ಯ ಹೊರಬಿದ್ದಿದೆ. ವಿದ್ಯಾನಗರ ಠಾಣೆ ಪಿಎಸ್‍ಐ ಸಿದ್ದೇಶ್ ಮತ್ತು ಸಿಬ್ಬಂದಿ ಪ್ರಕರಣ ದಾಖಲಿಸಿಕೊಂಡು ಗಫೂರ್‍ನನ್ನು ವಶಕ್ಕೆ ಪಡೆದಿದ್ದಾರೆ. ಮುಂದಿನ ತನಿಖೆ ನಡೆದಿದೆ.

Facebook Comments