ಚಿಕ್ಕಪ್ಪನ ಕೊಂದು ಕರಡಿ ಸಾಯಿಸಿದೆ ಎಂದು ನಂಬಿಸಿದ್ದವ ಈಗ ಅಂದರ್

ಈ ಸುದ್ದಿಯನ್ನು ಶೇರ್ ಮಾಡಿ

JAIL--TUMAKURU

ಕೊಪ್ಪಳ, ನ.9-ವ್ಯಕ್ತಿಯೊಬ್ಬ ಕರಡಿ ದಾಳಿಯಿಂದ ಮೃತಪಟ್ಟಿದ್ದಾನೆ ಎಂಬ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು , ವ್ಯಕ್ತಿಯ ಅಣ್ಣನ ಮಗನೇ ತನ್ನ ಚಿಕ್ಕಪ್ಪನನ್ನು ಹೊಡೆದು ಕೊಲೆ ಮಾಡಿರುವ ಪ್ರಕರಣವನ್ನು ಪೊಲೀಸರು ಬಯಲು ಮಾಡಿದ್ದಾರೆ. ಆರೋಪಿ ಯಮನೂರಪ್ಪ ಎಂಬುವವನು ತನ್ನ ಚಿಕ್ಕಪ್ಪ ಹಿರೇಹನುಮಂತಪ್ಪ , ತನ್ನ ಹೆಂಡತಿಯೊಂದಿಗೆ( ಹಿರೇಹನುಮಂತಪ್ಪನ ಸೊಸೆ) ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾನೆ ಎಂದು ಸಿಟ್ಟಿನಿಂದ ತನ್ನ ಸ್ನೇಹಿತ ಹುಸೇನ್ ಸಾಬ್ ಎಂಬುವನೊಂದಿಗೆ ಸೇರಿ ತೋಟದ ಮನೆಯಲ್ಲಿ ಮಲಗಿದ್ದ ಚಿಕ್ಕಪ್ಪ ಹನುಮಂತಪ್ಪನನ್ನು ಕೊಡಲಿಯಿಂದ ಹೊಡೆದು ಕೊಲೆ ಮಾಡಿದ್ದಾನೆ.

ಹಿರೇಹನುಮಂತಪ್ಪ ಎಂಬ ವ್ಯಕ್ತಿ ತನ್ನ ಅಣ್ಣನ ಮಗ ಯಮನೂರಪ್ಪನ ಹೆಂಡತಿ ಜೊತೆ ಅಕ್ರಮ ಸಂಬಂಧವಿಟ್ಟುಕೊಂಡಿದ್ದ. ಈ ಹಿನ್ನೆಲೆಯಲ್ಲಿ ಈ ಮೊದಲು ಯಮನೂರಪ್ಪ ನಿನ್ನನ್ನು ಕೊಲ್ಲುತ್ತೇನೆ ಎಂದು ತನ್ನ ಚಿಕ್ಕಪ್ಪನಿಗೆ ಎಚ್ಚರಿಕೆಯನ್ನೂ ನೀಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಈಗ ಯಮನೂರಪ್ಪ ಮತ್ತು ಹುಸೇನಪ್ಪ ಇಬ್ಬರು ಪೊಲೀಸರ ಅತಿಥಿಗಳಾಗಿದ್ದಾರೆ.

Facebook Comments

Sri Raghav

Admin