ನಿಷೇಧಿತ ಜಾತಿ ಶಬ್ದ ಬಳಸಿದ ಕೋಳಿವಾಡ-ಈಶ್ವರಪ್ಪ ಕ್ಷಮೆ ಕೋರುವಂತೆ ಸವಿತಾ ಸಮಾಜ ಆಗ್ರಹ

ಈ ಸುದ್ದಿಯನ್ನು ಶೇರ್ ಮಾಡಿ

Eshwarappa--02

ದಾವಣೆಗೆರೆ, ನ.9-ನಿಷೇಧಿತ ಜಾತಿ ಶಬ್ದವನ್ನು ಬಳಸಿ ನಮ್ಮ ಸಮಾಜಕ್ಕೆ ಅವಮಾನ ಮಾಡಿರುವ ವಿಧಾನಸಭಾಧ್ಯಕ್ಷ ಕೆ.ಬಿ.ಕೋಳಿವಾಡ ಹಾಗೂ ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಅವರು ಕ್ಷಮಾಪಣೆ ಕೇಳಬೇಕು. ಇಲ್ಲವಾದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಎಂ.ರಂಗಸ್ವಾಮಿ ಆಗ್ರಹಿಸಿದರು.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆ.ಬಿ.ಕೋಳಿವಾಡ ಅವರ ಜನ್ಮ ದಿನದಂದು ನಮ್ಮ ಜಾತಿಯ ಬಗ್ಗೆ ನಿಷೇಧಿತ ಪದ ಬಳಸಿ ಅವಮಾನಿಸಿದರು. ಆನಂತರ ಕೆ.ಎಸ್.ಈಶ್ವರಪ್ಪ ಅವರು ಪರಿವರ್ತನಾ ಯಾತ್ರೆಯಲ್ಲಿ ಅದೇ ರೀತಿ ನಿಷೇಧಿತ ಪದ ಬಳಸಿದ್ದಾರೆ. ಅವರು ಇಬ್ಬರು ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು. ನಮ್ಮನ್ನು ಮತಕ್ಕಾಗಿ ದುರುಪಯೋಗಪಡಿಸಿಕೊಳ್ಳುವ ರಾಜಕೀಯ ನಾಯಕರ ಕ್ರಮ ಸರಿಯಲ್ಲ. ಸರ್ಕಾರವು ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡು ಇವರ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಯಲಿದೆ ಎಂದು ಸವಿತಾ ಸಮಾಜ ಸಹಕಾರಿ ಸಂಘದ ಅಧ್ಯಕ್ಷರೂ ಆಗಿರುವ ರಂಗಸ್ವಾಮಿ ಎಚ್ಚರಿಕೆ ನೀಡಿದರು.

Facebook Comments

Sri Raghav

Admin