ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಪೊಲೀಸರಿಗೆ ದೂರು ನೀಡಿದ ಕೆ.ಮಥಾಯಿ

ಈ ಸುದ್ದಿಯನ್ನು ಶೇರ್ ಮಾಡಿ

Mathai--02

ಬೆಂಗಳೂರು, ನ.9- ಬಿಬಿಎಂಪಿ ಹಾಗೂ ಸರ್ಕಾರದಲ್ಲಿ ನಡೆದಿರುವ ಅಕ್ರಮಗಳನ್ನು ಬಯಲಿಗೆಳೆದ ಅಧಿಕಾರಿ ಕೆ.ಮಥಾಯಿ ಅವರಿಗೆ ಗೋಳು ತಪ್ಪಿಲ್ಲ. ಒಂದಲ್ಲ ಒಂದು ಕಿರುಕುಳ ನೀಡಲಾಗುತ್ತಿದೆ. ಬಿಬಿಎಂಪಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ಕೆ.ಮಥಾಯಿ ಅವರ ಸಂಬಳದಿಂದ ಕಡಿತಗೊಂಡ ಪಿಎಫ್ ಹಣವನ್ನು ಪಿಎಫ್ ಖಾತೆಗೆ ಬಿಬಿಎಂಪಿ ಹಣಕಾಸು ಅಧಿಕಾರಿಗಳು ಜಮಾ ಮಾಡಿಯೇ ಇಲ್ಲ. ಬಿಬಿಎಂಪಿ ಸಿಎಒ ವಿರುದ್ಧ ಸಕಾಲ ಅಧಿಕಾರಿಯಾಗಿರುವ ಕೆ.ಮಥಾಯಿ ಅವರು ಇಂದು ಹಲಸೂರು ಗೇಟ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.

ತಮ್ಮ ಸಂಬಳದಲ್ಲಿ ಕಡಿತಗೊಳಿಸಿದ ಪಿಎಫ್ ಹಣವನ್ನು ತಮ್ಮ ಪಿಎಫ್ ಖಾತೆಗೆ ಅಧಿಕಾರಿಗಳು ಜಮಾ ಮಾಡಬೇಕಿತ್ತು. ಸುಮಾರು 3 ಲಕ್ಷದ 60 ಸಾವಿರ ಪಿಎಫ್ ಹಣವನ್ನು ಖಾತೆಗೆ ಜಮಾ ಮಾಡದೆ ಅಕ್ರಮ ಮಾಡಿದ್ದಾರೆ. ತಮ್ಮ ಪಿಎಫ್ ಹಣವನ್ನುವಾಪಸ್ ಮಾಡುವಂತೆ ಬಿಬಿಎಂಪಿಗೆ ಕೆಎಎಸ್ ಅಧಿಕಾರಿ ಮಥಾಯಿ ಪತ್ರ ಬರೆದಿದ್ದಾರೆ. 2014 ರಿಂದ 2016ರ ಅವಧಿಯ ಈ ಹಣ ಪಾವತಿಯಾಗದೆ ಬಾಕಿಯಾಗಿ ಉಳಿದಿದೆ. ಚೀಫ್ ಅಕೌಂಟೆಂಟ್ ಆಫೀಸರ್ ವಿರುದ್ಧ ದೂರು ನೀಡಿದ್ದಾರೆ.

Facebook Comments

Sri Raghav

Admin