ಮೈಸೂರು : ವಿದೇಶಿ ಯುವತಿಗೆ ಲೈಂಗಿಕ ಕಿರುಕುಳ ಕೊಟ್ಟ ಶುಶ್ರೂಶಕನಿಗೆ 25 ವರ್ಷ ಶಿಕ್ಷೆ

ಈ ಸುದ್ದಿಯನ್ನು ಶೇರ್ ಮಾಡಿ

Jailed-01

ಮೈಸೂರು, ನ.9- ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ವಿದೇಶಿ ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದ ಶುಶ್ರೂಶಕನಿಗೆ ಮೈಸೂರು ನ್ಯಾಯಾಲಯ 25 ವರ್ಷ ಶಿಕ್ಷೆ ಹಾಗೂ 15 ಸಾವಿರ ರೂ. ದಂಡ ವಿಧಿಸಿದೆ. ಮಂಡ್ಯ ಜಿಲ್ಲೆಯ ಕೆಎಂ ದೊಡ್ಡಿ ನಿವಾಸಿ ಸುಮಿತ್ (25) ಶಿಕ್ಷೆಗೆ ಗುರಿಯಾದ ಶುಶ್ರೂಶಕ. ರಾಜಸ್ಥಾನ್ ಮತ್ತು ನವದೆಹಲಿಯಲ್ಲಿ ಬುಡಕಟ್ಟು ಸಂಶೋಧನೆಗೆಂದು ಆಗಮಿಸಿದ್ದ ಯುವತಿ ಮೈಸೂರಿಗೆ ಭೇಟಿ ನೀಡಿದ್ದರು.

ಈ ಸಂದರ್ಭದಲ್ಲಿ ಆಕೆಗೆ ಅನಾರೋಗ್ಯ ಕಾಣಿಸಿಕೊಂಡಿದ್ದರಿಂದ ನವೆಂಬರ್ 6, 2015ರಂದು ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಾಗಿದ್ದಾರೆ. ಈ ವೇಳೆ ಆರೋಗ್ಯ ತಪಾಸಣೆಗೆಂದು ಕೊಠಡಿಗೆ ತೆರಳಿದ್ದ ಸುಮಿತ್ ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ನಂತರ ಆಕೆಗೆ ಫೇಸ್‍ಬುಕ್ ಮೂಲಕ ಫ್ರೆಂಡ್ಸ್ ರಿಕ್ವೆಸ್ಟ್ ಕೂಡ ಕಳಿಸಿದ್ದಾನೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆ ಮಂಡಳಿಗೆ ಯುವತಿ ಮಾಹಿತಿ ನೀಡಿ, ನಂತರ ನಗರದ ಎನ್‍ಆರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಳು.

ಪ್ರಕರಣ ದಾಖಲಿಸಿಕೊಂಡಿದ್ದ ಆಗಿನ ಇನ್ಸ್‍ಪೆಕ್ಟರ್ ಗಜೇಂದ್ರ ಪ್ರಸಾದ್ ಆರೋಪಿಯನ್ನು ಬಂಧಿಸಿ ನ್ಯಾಯಾಲಯದಲ್ಲಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಮೈಸೂರಿನ 7ನೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ವಾದ-ವಿವಾದ ಆಲಿಸಿ ಅಮೆರಿಕದಲ್ಲಿರುವ ಯುವತಿಯೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿ ವಿವರ ಸಂಗ್ರಹಿಸಿದರು. ಸುಮಿತ್ ಮೇಲೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 25 ವರ್ಷ ಜೈಲು ಶಿಕ್ಷೆ, 15 ಸಾವಿರ ದಂಡ ವಿಧಿಸಲಾಗಿದೆ.

Facebook Comments

Sri Raghav

Admin