ರೈಲು ವೀಲ್ ಕಾರ್ಖಾನೆಯಲ್ಲಿ ಎಸ್ಎಸ್ಎಲ್ಸಿ, ಡಿಪ್ಲೋಮಾ ಆದವರಿಗೆ ಉದ್ಯೋಗವಕಾಶ

ಈ ಸುದ್ದಿಯನ್ನು ಶೇರ್ ಮಾಡಿ

RWF

ರೈಲು ಗಾಲಿ (ವೀಲ್) ಕಾರ್ಖಾನೆ (ಆರ್ ಡಬ್ಲ್ಯೂ ಎಫ್) ಯಲ್ಲಿ ಫಿಟ್ಟರ್ ಸೇರಿದಂತೆ ವಿವಿಧ ಹುದ್ದೆಗಳಿಗೆ ಎಸ್ ಎಸ್ ಎಲ್ ಸಿ ಮತ್ತು ಡಿಪ್ಲೋಮಾ ಪಡೆದ ಅರ್ಹರಿಂದ ಅರ್ಜಿ ಅಹ್ವಾನಿಸಿದ್ದು, ಅಧಿಕೃತ ವೆಬ್ ಸೈಟಿಂದ ಅರ್ಜಿ ಪಡೆದು, ಭರ್ತಿ ಮಾಡಿ ಕಳುಹಿಸುವಂತೆ ತಿಳಿಸಿದೆ.’

ಒಟ್ಟು ಹುದ್ದೆಗಳ ಸಂಖ್ಯೆ : 192

ಹುದ್ದೆಗಳ ವಿವರ

1) ಫಿಟ್ಟರ್ ; 85
2) ಮೆಚಿನಿಸ್ಟ್ : 31
3) ಮ್ಯಾಕಾನಿಕ್ : 08
4) ಟರ್ನರ್ : 05
5) ಸಿಎನ್ಸಿ ಪ್ರೋಗ್ರಾಮಿಂಗ್ ಕಮ್ ಅಪರೇಟರ್ : 23
6) ಎಲೆಕಕ್ಟ್ರೀಷಿಯನ್ : 18
7) ಎಲೆಕ್ಟ್ರಾನಿಕ್ ಮ್ಯಾಕಾನಿಕ್ : 22

ವಿದ್ಯಾರ್ಹತೆ : ಮಾನ್ಯತೆ ಪಡೆದಿರುವ ಶಿಕ್ಷಣ ಸಂಸ್ಥೆಯಿಂದ ಶೇ.50 ರಷ್ಟು ಅಂಕಗಳೊಂದಿಗೆ 10 ನೇ ತರಗತಿ / ಐಟಿಐ ಅಥವಾ ಇದಕ್ಕೆ ಸಮನಾದ ಶಿಕ್ಷಣದಲ್ಲಿ ಉತ್ತೀರ್ಣರಾಗಿರಬೇಕು.

ವಯೋಮಿತಿ : 24 ವರ್ಷ ವಯಸ್ಸನ್ನು ನಿಗಧಿಗೊಳಿಸಲಾಗಿದೆ. ಜೊತೆಗೆ ಮಿಸಲಾತಿ ಪಡೆಯುವವರಿಗೆ ವಯೋಮಿತಿಯಲ್ಲಿ ಸಡಿಲತೆ ನೀಡಲಾಗಿದೆ.

ಶುಲ್ಕ ; ಸಾಮಾನ್ಯ ವರ್ಗದವರಿಗೆ 100 ರೂ ಶುಲ್ಕ ನಿಗಧಿ ಮಾಡಲಾಗಿದ್ದು, ಎಸ್ಸಿ, ಎಸ್ಟಿ ಹಾಗೂ ಮಹಿಳೆಯರಿಗೆ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.

ಅರ್ಜಿ ಸಲ್ಲಿಸುವ ವಿಳಾಸ : ಮುಖ್ಯ ಸಿಬ್ಬಂದಿ ಅಧಿಕಾರಿ, ರೈಲ್ವೆ ವೀಲ್ ಫ್ಯಾಕ್ಟರಿ, ಯಲಹಂಕ, ಬೆಂಗಳೂರು- 560064 ಇಲ್ಲಿಗೆ ಕಳುಹಿಸುವಂತೆ ತಿಳಿಸಿದೆ.

ಹೆಚ್ಚಿನ ಮಾಹಿತಿಗಾಗಿ  ವೆಬ್ ಸೈಟ್ ವಿಳಾಸ  www.rwf.indianrailways.gov.in   ಗೆ ಭೇಟಿ ನೀಡಿ.

ಅಧಿಸೂಚನೆ

2017-18-trade--apprentice-notification-final-001 2017-18-trade--apprentice-notification-final-003 2017-18-trade--apprentice-notification-final-004 2017-18-trade--apprentice-notification-final-005 2017-18-trade--apprentice-notification-final-006 2017-18-trade--apprentice-notification-final-007 2017-18-trade--apprentice-notification-final-002

Facebook Comments