ವಿಮಾ ಪಾಲಿಸಿಗೂ ಆಧಾರ್ ಲಿಂಕ್ ಮಾಡುವುದು ಕಡ್ಡಾಯ..!

ಈ ಸುದ್ದಿಯನ್ನು ಶೇರ್ ಮಾಡಿ

Insurence--02

ನವದೆಹಲಿ, ನ.9-ವಿಶಿಷ್ಟ ಗುರುತು (ಯುಐಡಿ) ಅಥವಾ ಆಧಾರ್ ಸಂಖ್ಯೆಯನ್ನು ಎಲ್ಲ ವಿಮಾ ಪಾಲಿಸಿಗಳ ಜೊತೆ ಸಂಪರ್ಕಿಸುವುದು ಕಡ್ಡಾಯ. ಎಲ್ಲ ವಿಮಾ ಕಂಪನಿಗಳು ಈ ಶಾಸನಬದ್ಧ ಅಗತ್ಯತೆಗೆ ಬದ್ಧವಾಗಿರಬೇಕೆಂದು ವಿಮಾ ನಿಯಂತ್ರಣ ಮತ್ತು ಅಭಿವೃದ್ದಿ ಪ್ರಾಧಿಕಾರ (ಐಆರ್‍ಡಿಎಐ) ಸೂಚಿಸಿದೆ.
ಹಣಕಾಸು ಅವ್ಯವಹಾರ (ದಾಖಲೆಗಳ ನಿರ್ವಹಣೆ) ತಡೆ ಆರನೇ ತಿದ್ದುಪಡಿ ನಿಯಮಾವಳಿ-2017ರ ಅನ್ವಯ ಆಧಾರ್ ಸಂಖ್ಯೆಯನ್ನು ಸಂಪರ್ಕಿಸುವುದು ಕಡ್ಡಾಯ ಎಂದು ಸ್ಪಷ್ಟಪಡಿಸಲಾಗಿದೆ.

ಹಾಲಿ ಇರುವ ಎಲ್ಲ ವಿಮಾ ಪಾಲಿಸಿಗಳಿಗೆ ಆಧಾರ್ ಸಂಪರ್ಕ ಕಲ್ಪಿಸುವುದನ್ನು ಕೇಂದ್ರ ಸರ್ಕಾರ ಕಳೆದ ಜೂನ್‍ನಲ್ಲಿ ಕಡ್ಡಾಯಗೊಳಿಸಿ, ಪಾನ್ ಮತ್ತು ನಮೂನೆ-60 ಅನ್ನು ನೀಡಿದಲ್ಲಿ ಮಾತ್ರ ಹಣಕಾಸು ಸೇವೆಗಳನ್ನು ಪಡೆಯಲು ಸಾಧ್ಯ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿತ್ತು.  ಈಗ ನಿಯಂತ್ರಣ ಪ್ರಾಧಿಕಾರ ಎಲ್ಲ ಸಾಮಾನ್ಯ ವಿಮೆ ಮತ್ತು ಜೀವ ವಿಮೆ ಕಂಪನಿಗಳಿಗೆ ಸೂಚನೆ ನೀಡಿ, ಈ ಶಾಸನಾತ್ಮಕ ಬದ್ಧತೆಯನ್ನು ಯಾವುದೇ ವಿಳಂಬವಿಲ್ಲದೇ ಪೂರ್ಣಗೊಳಿಸಬೇಕೆಂದು ಸೂಚಿಸಿದೆ.

ಹಣಕಾಸು ಸೇವೆಗಳಿಗೆ ಏಕೀಕೃತ ಸೇವೆಗಳನ್ನು ಸೃಷ್ಟಿಸುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ. ಇದರೊಂದಿಗೆ ಸರ್ಕಾರ ಡಿಜಿಟಲೀಕರಣ ಕಾರ್ಯಸೂಚಿಯನ್ನು ಉತ್ತೇಜಿಸಲು ಇದು ಸಕಾಲ ಎಂದು ಐಸಿಐಸಿಐ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭಾರ್ಗವ್ ದಾಸ್ ಗುಪ್ತಾ ಹೇಳಿದ್ದಾರೆ.

Facebook Comments

Sri Raghav

Admin