ಹುಷಾರ್.. ನೋಟ್ ಬ್ಯಾನ್ ವಿರುದ್ಧ ಮಾತನಾಡಿದರೆ ಬೀಳುತ್ತೆ ಗೂಸಾ..!

ಈ ಸುದ್ದಿಯನ್ನು ಶೇರ್ ಮಾಡಿ

Modi--001

ಬೆಂಗಳೂರು, ನ.9- ನೋಟು ಅಮಾನ್ಯೀಕರಣದ ವಿರುದ್ಧ ಮಾತನಾಡಿದರೆ ಬೀಳುತ್ತೆ ಗೂಸಾ. ಜನಸಾಮಾನ್ಯರೇ ಎಚ್ಚರ…! ಇದು ಬಿಜೆಪಿ ಕಾರ್ಪೊರೇಟರ್ ಬೆಂಬಲಿಗರಿಂದ ಗೂಂಡಾಗಿರಿ ವರ್ತನೆ. ನೋಟ್ ಬ್ಯಾನ್ ಅಂದ್ರೆ ತಪ್ಪು, ನಿಮಗೆ ಥಳಿತ ಗ್ಯಾರಂಟಿ. ನೋಟ್ ಬ್ಯಾನ್ ಮಾಡಿದ್ದು, ತಪ್ಪು ಎಂದ ಸಾರ್ವಜನಿಕರಿಗೆ ಕಾರ್ಪೊರೇಟರ್ ಗಳು ದಂಡ ಹಾಗೂ ಮೋದಿ ಭಕ್ತರಿಂದ ಥಳಿಸಿರುವ ಘಟನೆ ಮಲ್ಲೇಶ್ವರದ ಅರಮನೆನಗರ ವಾರ್ಡ್‍ನಲ್ಲಿ ನಡೆದಿದೆ.

ಅರಮನೆನಗರ ವಾರ್ಡ್ ಬಿಬಿಎಂಪಿ ಸದಸ್ಯೆಯ ಪತಿ ಮಹಾಶಯ ಕೇಶವ ಹಾಗೂ ಅವರ ಬೆಂಬಲಿಗರು ನೋಟ್ ಬ್ಯಾನ್ ವಿರೋಧಿಸಿದವರನ್ನು ಥಳಿಸಿದ್ದಾರೆ ಎಂಬ ದೂರು ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಬಿಬಿಎಂಪಿ ಬಿಜೆಪಿ ಸದಸ್ಯೆ ಸುಮಂಗಲ ಹಾಗೂ ಕೃಷ್ಣ ನಿನ್ನೆ ಬೆಳಗ್ಗೆ ಸ್ಯಾಂಕಿ ಟ್ಯಾಂಕಿ ಕೆರೆಯ ಬಳಿ ನೋಟು ಅಮಾನ್ಯೀಕರಣದ ಪರವಾಗಿ ಸಹಿ ಸಂಗ್ರಹಿಸುತ್ತಿದ್ದರು. ನಾನು ಪರವಾಗಿ ಸಹಿ ಮಾಡುವುದಿಲ್ಲ. ನೋಟ್ ಬ್ಯಾನ್ ಸಂದರ್ಭದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದ್ದೇನೆ ಎಂದು ನವೀನ್ ಎಂಬುವರು ಹೇಳಿದ್ದಾರೆ. ಆ ಸಂದರ್ಭದಲ್ಲಿ ನವೀನ್‍ಗೆ ಅವಾಚ್ಯಶಬ್ಧಗಳಿಂದ ನಿಂದಿಸಿ ಅವರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆಗೆ ಮುಂದಾಗಿದ್ದಾರೆ. ಈ ಸಂಬಂಧ ನವೀನ್ ಸದಾಶಿವನಗರ ಠಾಣೆಗೆ ದೂರು ನೀಡಿದ್ದಾರೆ.

Facebook Comments

Sri Raghav

Admin