ಐಎಸ್ ಉಗ್ರರ ವಿರುದ್ಧ ಗೆಲುವು ಸಾಧಿಸಿರುವುದಾಗಿ ಸಿರಿಯಾ ಘೋಷಣೆ

ಈ ಸುದ್ದಿಯನ್ನು ಶೇರ್ ಮಾಡಿ

ISIS--01

ಬೈರೂತ್, ನ.10-ವಿಶ್ವದ ಯಾವುದೇ ಭಾಗದಲ್ಲಿ ನಡೆಯುವ ಭೀಕರ ಭಯೋತ್ಪಾದನೆ ಕೃತ್ಯಗಳಿಗೆ ಪ್ರಮುಖ ಕಾರಣವಾಗಿರುವ ಅತ್ಯಂತ ಕ್ರೂರ ಉಗ್ರಗಾಮಿ ಸಂಘಟನೆ ಇಸ್ಲಾಮಿಕ್ ಸ್ಟೇಟ್(ಐಎಸ್) ವಿರುದ್ಧ ನಿರ್ಣಾಯಕ ಗೆಲುವು ಸಾಧಿಸಿರುವುದಾಗಿ ಸಿರಿಯಾ ಘೋಷಿಸಿದೆ. ಸಿರಿಯಾದಲ್ಲಿ ಐಎಸ್ ಉಗ್ರರು ನಿಯಂತ್ರಣ ಹೊಂದಿದ್ದ ಕಟ್ಟಕಡೆಯ ಪಟ್ಟಣವನ್ನು ಭಾರೀ ಹೋರಾಟದ ನಂತರ ವಶಪಡಿಸಿಕೊಳ್ಳಲಾಗಿದೆ. ಆ ಮೂಲಕ ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕರ ವಿರುದ್ಧ ದೊಡ್ಡ ಮಟ್ಟದ ಗೆಲುವು ಸಾಧಿಸಲಾಗಿದೆ ಎಂದು ಸಿರಿಯಾ ಸೇನೆ ಇಂದು ಘೋಷಿಸಿದೆ.

ಅಲ್ಪು ಪಟ್ಟಣದಲ್ಲಿ ಉಗ್ರರ ಪ್ರಾಬಲ್ಯವನ್ನು ಹೊಸುಕಿ ಹಾಕಲಾಗಿದೆ. ಬಂಡುಕೋರರು ಪಲಾಯವಾಗಿದ್ದು, ಪಟ್ಟಣದ ಹೊರವಲಯದ ಮರುಭೂಮಿಯಲ್ಲಿ ಅವರ ದಮನ ಕಾರ್ಯಾಚರಣೆ ಮುಂದುವರಿದಿದೆ ಎಂದು ಉನ್ನತ ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ.

Facebook Comments

Sri Raghav

Admin