ಗುಜರಾತ್ ಚುನಾವಣಾ ರಣರಂಗಕ್ಕಿಳಿದ ಶಿವಸೇನೆ

ಈ ಸುದ್ದಿಯನ್ನು ಶೇರ್ ಮಾಡಿ

Shivasene--01 ಮುಂಬೈ, ನ.10-ಪ್ರತಿಷ್ಠಿತ ಗುಜರಾತ್ ರಾಜ್ಯದ ಗದ್ದುಗೇರಲು ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿನ ಹೋರಾಟಕ್ಕೆ ಅಖಾಡ ಸಜ್ಜುಗೊಂಡಿರುವ ಮಧ್ಯೆಯೇ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಶಿವಸೇನೆ ಘೋಷಿಸಿದ್ದು ಕದನ ಕುತೂಹಲಕ್ಕೆ ಕಾರಣವಾಗಿದೆ. 182 ಕ್ಷೇತ್ರಗಳ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಶಿವಸೇನೆ 60 ರಿಂದ 65 ಸ್ಥಾನಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ಸಿದ್ಧತೆ ಮಾಡಿಕೊಂಡಿದೆ.

ಇದೇ ವೇಳೆ, ಪಾಟಿದಾರ್ (ಪಟೇಲ್ ಸಮುದಾಯ) ಮೀಸಲಾತಿ ಚಳವಳಿ ಧುರೀಣ ಮತ್ತು ಬಿಜೆಪಿಯ ಕಟ್ಟಾ ವಿರೋಧಿ ಹಾರ್ದಿಕ್ ಪಟೇಲ್‍ರನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳಲು ಶಿವಸೇನೆ ಪ್ರಯತ್ನಗಳನ್ನು ಮುಂದುವರಿಸಿದೆ. ನೋಟು ರದ್ದತಿ ಮತ್ತು ಜಿಎಸ್‍ಟಿ ನಿರ್ಧಾರಗಳಿಂದಾಗಿ ಗುಜರಾತ್‍ನಲ್ಲಿ ಬಿಜೆಪಿ ಜನಪ್ರಿಯತೆ ಕಳೆದುಕೊಳ್ಳುತ್ತಿದೆ ಎಂದು ಶಿವಸೇನೆ ಪ್ರತಿಪಾದಿಸಿದೆ. ಅಲ್ಲದೇ, ಶಿವಸೇನೆ ಎನ್‍ಡಿಎ ಮಿತ್ರಪಕ್ಷವಾಗಿ ಉಳಿದಿರುವುದಕ್ಕೆ ಬೆಲೆ ತೆರಬೇಕಾಗುತ್ತದೆ ಎಂಬ ಕಾರಣಕ್ಕಾಗಿ ಪಕ್ಷವು ಈ ನಿರ್ಧಾರ ಕೈಗೊಂಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

Facebook Comments

Sri Raghav

Admin