ಜೆಡಿಎಸ್ ಬಿಟ್ಟು ಎಲ್ಲೂ ಹೋಗಲ್ಲ ಎಂದ ಶಾಸಕ ಪಿಳ್ಳ ಮುನಿಶಾಮಪ್ಪ

ಈ ಸುದ್ದಿಯನ್ನು ಶೇರ್ ಮಾಡಿ

Pilla-Muniswamappa

ದೇವನಹಳ್ಳಿ,ನ.10-ಜೆಡಿಎಸ್‍ನ ಆರು ಮಂದಿ ಶಾಸಕರು ಬೇರೆ ಪಕ್ಷ ಸೇರಲಿದ್ದಾರೆ ಎನ್ನುವುದು ಶುದ್ಧ ಸುಳ್ಳು ಎಂದು ದೇವನಹಳ್ಳಿ ಕ್ಷೇತ್ರದ ಜೆಡಿಎಸ್. ಶಾಸಕ ಪಿಳ್ಳಮುನಿಶಾಮಪ್ಪ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸೇರ್ಪಡೆಯಾಗಿರುವ ಯೋಗೇಶ್ ಹಾಗೂ ಮಾಜಿ ಸಚಿವ ಅಶೋಕ್ ಜೆಡಿಎಸ್ ಪಕ್ಷಕ್ಕೆ ಸೇರುವ ಇಚ್ಚೆ ಇದ್ದರೆ ವರಿಷ್ಠ ದೇವೇಗೌಡರ ಮತ್ತು ಕುಮಾರಸ್ವಾಮಿ ಬಳಿ ಚರ್ಚಿಸಿ ಸೇರ್ಪಡೆಗೆ ವೇದಿಕೆ ಕಲ್ಪಿಸಲಾಗುವುದು, ಒಂದು ಪಕ್ಷದ ಮುಖಂಡರಾದ ಇವರು ಇನ್ನೊಂದು ಪಕ್ಷದ ಅಸ್ತಿತ್ವಕ್ಕೆ ಧಕ್ಕೆ ತರಬಾರದು ಎಂದರು.

ನಾನು ಮಂಡಲ ಪಂಚಾಯ್ತಿಯ ಸದಸ್ಯನಾಗಿ ತಾಲ್ಲೂಕಿನ ಜನತೆಗೆ ನನ್ನ ಕೈಲಾದ ಸೇವೆ ಮಾಡಿ ಈಗ ಶಾಸಕನಾಗಿ ನನ್ನ ಕ್ಷೇತ್ರದಲ್ಲಿ ಸರ್ಕಾರದಿಂದ ನೀಡುವ ಅನುದಾನದಲ್ಲಿ ಕಾಮಗಾರಿಗಳನ್ನು, ಮೂಲಭೂತ ಸೌಕರ್ಯಗಳಾದ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ, ನೀರಿನ ವ್ಯವಸ್ಥೆ, ರಸ್ತೆಗಳ ಅಭಿವೃದ್ದಿಯ ಮೂಲಕ ಶ್ರಮವಹಿಸಿದ್ದೇನೆ ಎಂದರು. ಮುಖಂಡರಾದ ಜಿ.ಎ. ರವೀಂದ್ರ, ಮುನಿನಂಜಪ್ಪ, ತಾ.ಯುವ ಅಧ್ಯಕ್ಷ ಭರತ್‍ಕುಮಾರ್, ಅನಿಲ್ ಯಾದವ್, ಬುಳ್ಳಹಳ್ಳಿ ರಾಜಪ್ಪ, ಎಸ್.ಸಿ.ಘಟಕದ ಅಧ್ಯಕ್ಷ ಹನುಮಂತಪ್ಪ, ನರಸಿಂಹಮೂರ್ತಿ, ಸದಸ್ಯರಾದ ಸೊಸೈಟಿ ಕುಮಾರ್, ಶಶಿಕುಮಾರ್, ಟೌನ್ ಪ್ರ. ಕಾರ್ಯದರ್ಶಿ ಸುಬ್ಬಣ್ಣ, ಆಸೀಪ್, ಅಧ್ಯಕ್ಷ ಚಂದ್ರೇಗೌಡ ಮತ್ತಿತರರು ಉಪಸ್ಥಿತರಿದ್ದರು.

Facebook Comments

Sri Raghav

Admin