ಬೆಳ್ಳಿ ಪರದೆ ಮೇಲೆ ‘ಸಂಯುಕ್ತ-2’ ಪ್ರಾರಂಭ

ಈ ಸುದ್ದಿಯನ್ನು ಶೇರ್ ಮಾಡಿ

sam-1
ಈಗಾಗಲೇ ಟ್ರೈಲರ್, ಟೀಸರ್, ಪೋಸ್ಟರ್‍ಗಳ ಮೂಲಕ ಕುತೂಹಲ ಮೂಡಿಸಿರುವ ಸಂಯುಕ್ತ-2 ಚಿತ್ರ ಈ ವಾರ ರಾಜ್ಯಾದ್ಯಂತ ತೆರೆ ಕಾಣಲಿದೆ. ಮೂರು ದಶಕಗಳ ಶಿವರಾಜ್‍ಕುಮಾರ್ ಅಭಿನಯದಲ್ಲಿ ತೆರೆ ಕಂಡಿದ್ದ ಚಿತ್ರ ಸಂಯುಕ್ತ. ಹಾರರ್ ಕಥಾನಕ ಹೊಂದಿದ್ದ ಆ ಚಿತ್ರವು ಯಶಸ್ವಿ ಪ್ರದರ್ಶನ ಕಂಡಿತ್ತು. ಇದೀಗ ಅಂಥದ್ದೇ ಕಥಾನಕ ಹೊಂದಿರುವ ಈ ಚಿತ್ರ ನಿರ್ಮಾಣಗೊಂಡಿದೆ. ಈ ಚಿತ್ರದಲ್ಲಿ ಕೂಡ ಮೂವರು ಸ್ನೇಹಿತರ ಮೇಲೆಯೇ ಚಿತ್ರಕಥೆ ಮಾಡಲಾಗಿದೆಯಾದರೂ ಕಥಾವಸ್ತು ಬೇರೆ ರೀತಿಯಲ್ಲಿದೆಯಂತೆ. ಈ ಚಿತ್ರದ ಧ್ವನಿ ಸುರುಳಿ ಬಿಡುಗಡೆ ಸಮಾರಂಭ ಇತ್ತೀಚೆಗೆ ಅದ್ಧೂರಿಯಾಗಿ ನಡೆದಿದ್ದು, ರಾಕಿಂಗ್ ಸ್ಟಾರ್ ಯಶ್ ಸಿಡಿ ಬಿಡುಗಡೆ ಮಾಡುವ ಮೂಲಕ ತಂಡಕ್ಕೆ ಶುಭ ಕೋರಿದರು.

ಡಾ. ಮಂಜುನಾಥ್ ನಿರ್ಮಾಣದ ಈ ಚಿತ್ರವನ್ನು ಅಭಿರಾಮ್ ನಿರ್ದೇಶನ ಮಾಡಿದ್ದಾರೆ. ಈ ಚಿತ್ರಕ್ಕೆ ಕೆ.ವಿ.ರವಿಚಂದ್ರನ್ ಸಂಗೀತವನ್ನು ನೀಡಿದ್ದಾರೆ. ಚೇತನ್ ಚಂದ್ರ ಮುಖ್ಯ ಭೂಮಿಕೆಯಲ್ಲಿರೋ ಈ ಚಿತ್ರದಲ್ಲಿ ಸಂಜಯ್ ಮತ್ತು ಪ್ರಭು ಸೂರ್ಯ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ನೇಹಾ ಪಾಟೀಲ್ ಮತ್ತು ಈ ಹಿಂದೆ ಮಮ್ಮಿ ಚಿತ್ರದಲ್ಲಿ ನಟಿಸಿ ಗಮನ ಸೆಳೆದಿದ್ದ ಐಶ್ವರ್ಯಾ ಸಿಂಧೋಗಿ ನಾಯಕಿಯರಾಗಿದ್ದಾರೆ. ಎಲ್ಲ ಅಂದುಕೊಂಡಂತೆ ನಡೆಯು ತ್ತಿದ್ದು, ರಾಜ್ಯಾದ್ಯಂತ ಅದ್ಧೂರಿ ಪ್ರಚಾರದ ಮೂಲಕ ಸಂಯುಕ್ತ-2 ಕರೆತರುತ್ತಿದ್ದಾರೆ.

Facebook Comments

Sri Raghav

Admin