ಮೈಸೂರಿನ ಖಾಸಗಿ ಶಾಲೆಯ ಮುಖ್ಯಸ್ಥನ ಸಾವಿನ ಪ್ರಕರಣಕ್ಕೆ ಸಿಕ್ತು ಹೊಸ ಟ್ವಿಸ್ಟ್..!

ಈ ಸುದ್ದಿಯನ್ನು ಶೇರ್ ಮಾಡಿ

Mysuru--01

ಮೈಸೂರು, ನ.10-ಖಾಸಗಿ ಶಾಲೆ ಮುಖ್ಯಸ್ಥನ ಸಾವಿಗೆ ಟ್ವಿಸ್ಟ್ ಸಿಕ್ಕಿದ್ದು, ಸಹಜ ಸಾವು ಎನ್ನಲಾಗಿದ್ದ ಈ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ. ನಗರದ ದಟ್ಟಗಳ್ಳಿ ವಾಸಿ ಚಾಣಕ್ಯ ಕೃಷ್ಣ 2016ರ ಅಕ್ಟೋಬರ್ 19 ರಂದು ಮೃತಪಟ್ಟಿದ್ದರು. ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಕೃಷ್ಣ ಸಾವು ಸಹಜವಾಗಿ ಆಗಿಲ್ಲ. ಇದು ಕೊಲೆ ಎಂದು ಗೊತ್ತಾಗಿದೆ.

ಇತ್ತೀಚೆಗೆ ಹಂತಕರು ಬಾರ್‍ವೊಂದರಲ್ಲಿ ಕುಳಿತು ಕುಡಿದ ಮತ್ತಿನಲ್ಲಿ ತಾವು ಚಾಣಕ್ಯ ಶಾಲೆಯ ಮುಖ್ಯಸ್ಥ ಕೃಷ್ಣನನ್ನು ಕೊಲೆ ಮಾಡಿ ಹಾರ್ಟ್ ಅಟ್ಯಾಕ್ ಎಂದು ಬಿಂಬಿಸಿದೆವು. ಇದುವರೆಗೂ ನಮ್ಮನ್ನು ಯಾರು ಏನೂ ಮಾಡಲಾಗಿಲ್ಲ ಆ ಮಟ್ಟದಲ್ಲಿ ಸೀಕ್ರೇಟ್ ಮೈನ್‍ಟೇನ್ ಮಾಡಿದ್ದೇವೆ ಎಂದು ಮಾತಾಡಿಕೊಳ್ಳುತ್ತಿದ್ದರು. ಆಕಸ್ಮಿಕವಾಗಿ ಇದೇ ಬಾರ್‍ಗೆ ಕೃಷ್ಣನ ಸಂಬಂಧಿಯೊಬ್ಬರು ಬಂದಿದ್ದು, ಹಂತಕರ ಮಾತುಗಳನ್ನು ಕೇಳಿಸಿಕೊಂಡು ಅನುಮಾನಗೊಂಡು ಪೊಲೀಸರಿಗೆ ತಿಳಿಸಿದ್ದಾರೆ.

ನಗರ ಪೊಲೀಸ್ ಆಯುಕ್ತ ಸುಬ್ರಹ್ಮಣ್ಯೇಶ್ವರರಾವ್ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಿಸಿಬಿ ಪೊಲೀಸರಿಗೆ ತನಿಖೆ ನಡೆಸುವಂತೆ ಸೂಚಿಸಿದ್ದಾರೆ.
ಸಿಸಿಬಿ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿ ಕುವೆಂಪು ನಗರದಲ್ಲಿರುವ ಚಾಣಕ್ಯ ಶಾಲೆಗೆ ಬಂದು ಅಲ್ಲಿನವರನ್ನು ವಿಚಾರಿಸಿದ್ದಾರೆ. ಈ ವೇಳೆ ಈ ಶಾಲೆಗೆ ಪ್ರತಿದಿನ ನೀರು ಸರಬರಾಜು ಮಾಡುತ್ತಿದ್ದ ಮಂಜು ಎಂಬುವನ ಮೇಲೆ ಅನುಮಾನ ಬಂದಿದೆ.

ತಕ್ಷಣ ಆತನನ್ನು ಕರೆ ತಂದು ವಿಚಾರಣೆಗೊಳಪಡಿಸಿದಾಗ ಕೃಷ್ಣನ ಪತ್ನಿ ರಾಧ ಆತನನ್ನು ಕೊಲೆ ಮಾಡುವಂತೆ ತಿಳಿಸಿದ್ದಳು. ಅದರಂತೆ ಆಕೆಯೂ ಸೇರಿದಂತೆ ನಾವು ನಾಲ್ವರು ಕೃಷ್ಣ ಮನೆಯಲ್ಲಿ ಮಲಗಿದ್ದಾಗ ಆತನ ಮುಖದ ಮೇಲೆ ದಿಂಬು ಹಾಕಿ ಉಸಿರುಗಟ್ಟಿಸಿ ಕೊಲೆ ಮಾಡಿ ನಂತರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಬಿಂಬಿಸಿ ಶವಸಂಸ್ಕಾರ ನೆರವೇರಿಸಿದ್ದೆವು ಎಂದು ಬಾಯ್ಬಿಟ್ಟಿದ್ದಾನೆ. ಸಿಸಿಬಿ ಪೊಲೀಸರು ನಿನ್ನೆ ರಾತ್ರಿ ಕೃಷ್ಣನ ಪತ್ನಿ ರಾಧಳನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.   ಇದೀಗ ಕುವೆಂಪುನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸಿಸಿಬಿ ಪೊಲೀಸರೊಂದಿಗೆ ತಲೆಮರೆಸಿಕೊಂಡಿರುವ ಇನ್ನಿಬ್ಬರು ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.

Facebook Comments

Sri Raghav

Admin