ವೈಶಾಖಿನಿ ಚಿತ್ರದ ಟೀಸರ್ ಬಿಡುಗಡೆ

ಈ ಸುದ್ದಿಯನ್ನು ಶೇರ್ ಮಾಡಿ

vaishali-1

ಕನ್ನಡದಲ್ಲಿ ಎಪಿಕ್ ಸ್ಟೋರಿಯನ್ನು ಇಟ್ಟುಕೊಂಡು ನಿರ್ಮಾಣವಾಗುತ್ತಿರುವ ಸಿನಿಮಾಗಳ ಸಾಲಿಗೆ ಶೀಘ್ರದಲ್ಲಿಯೇ ಮತ್ತೊಂದು ಸಿನಿಮಾ ಸೇರ್ಪಡೆಯಾಗುತ್ತಿದೆ ಅದರ ಹೆಸರು ವೈಶಾಖಿನಿ. ಸ್ನೇಹ ಎಂಟರ್‍ಟೈನರ್ಸ್ ಮತ್ತು ಡಿಜೋ ಎಂಟರ್‍ಟೈನ್ಮೆಂಟ್ (ಮುಂಬೈ) ಬ್ಯಾನರ್‍ಗಳ ಸಹಯೋಗದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರ ಕನ್ನಡ ಮತ್ತು ಮರಾಠಿ ಭಾಷೆಗಳಲ್ಲಿ ಏಕಕಾಲಕ್ಕೆ ನಿರ್ಮಾಣವಾಗುತ್ತಿದೆ. ಕನ್ನಡದಲ್ಲಿ ವೈಶಾಖಿನಿ ಎಂಬ ಹೆಸರಿನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ನಿರ್ದೇಶಕ ಬಿ.ಎಸ್ ಸಂಜಯ್ ಆ್ಯಕ್ಷನ್-ಕಟ್ ಹೇಳಿದರೆ, ಮರಾಠಿ ಅವತರಣಿಕೆಗೆ ನಿರ್ದೇಶಕ ವಿನ್ಸಂಟ್ ಕಸ್ಮಿರ್ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಈಗಾಗಲೇ ಚಿತ್ರದ ಶೇ.50ರಷ್ಟು ಭಾಗದ ಚಿತ್ರೀಕರಣವನ್ನು ಕೂಡ ಕಂಪ್ಲೀಟ್ ಮಾಡಿರುವ ಚಿತ್ರತಂಡ, ಚಿತ್ರದ ಬಗ್ಗೆ ಒಂದಷ್ಟು ಮಾಹಿತಿಯನ್ನು ಹಂಚಿಕೊಳ್ಳಲು ಇತ್ತೀಚೆಗೆ ಪತ್ರಿಕಾಗೋಷ್ಠಿಯನ್ನು ಆಯೋಜಿಸಿತ್ತು. ಇದೇ ಸಂದರ್ಭದಲ್ಲಿ ವೈಶಾಖಿನಿಯ ಫಸ್ಟ್‍ಲುಕ್ ಪೋಸ್ಟರ್ ಮತ್ತು ಟೀಸರ್‍ನ್ನು ಅನಾವರಣಗೊಳಿಸಿದೆ.

ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ಬಿ.ಎಸ್.ಸಂಜಯ್, ವಿಶಾಖಿನಿ, ಇದೊಂದು ಎಪಿಕ್ ಹಾರರ್ ಸ್ಟೋರಿಯನ್ನು ಹೊಂದಿದ ಸಬ್ಜೆಕ್ಟ್. ಪುರಾಣದಿಂದ ಹಿಡಿದು ಇಂದಿನ ಜನರೇಷನ್‍ವರೆಗೂ ಸಿನಿಮಾದ ಕಥೆ ಸಾಗುತ್ತದೆ. ಹೊಸದಾಗಿ ಮದುವೆಯಾದ ರಾಜ-ರಾಣಿ, ಮಧುಚಂದ್ರದ ಸಮಯದಲ್ಲಿರುವಾಗ ನಡೆಯುವ ಘಟನೆಯೊಂದು, ಬೇರೆ ಬೇರೆ ತಿರುವುಗಳನ್ನು ಪಡೆದುಕೊಂಡು ಅಂತಿಮವಾಗಿ ಏನಾಗುತ್ತದೆ ಎಂಬುದೇ ಈ ಚಿತ್ರದ ಕಥಾಹಂದರ. ಕನ್ನಡ ಮತ್ತು ಮರಾಠಿಯಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದ್ದರೂ, ಎರಡೂ ಭಾಷೆಯಲ್ಲೂ ಅದೇ ಭಾಷೆಯ ಬೇರೆ ಬೇರೆ ಕಲಾವಿದರು ಅಭಿನಯಿಸುತ್ತಿದ್ದಾರೆ. ಈಗಾಗಲೇ ಚಿತ್ರದ ಬಹುತೇಕ ಭಾಗದ ಚಿತ್ರೀಕರಣ ಪೂರ್ಣವಾಗಿದ್ದು, ಮುಂದಿನ ವರ್ಷದ ಆರಂಭದಲ್ಲಿ ಸಿನಿಮಾವನ್ನು ತೆರೆಗೆ ತರುವ ಪ್ಲಾನ್ ಇದೆ ಎಂದರು. ಚಿತ್ರದ ನಾಯಕಿ ಅನಿತಾ ಭಟ್ ಮಾತನಾಡುತ್ತ ಇದೇ ಮೊದಲ ಬಾರಿಗೆ ಟೈಟಲ್ ರೋಲ್ ಕ್ಯಾರೆಕ್ಟರ್‍ನಲ್ಲಿ ಅಭಿನಯಿಸಿದ್ದೇನೆ. ಈ ಸಿನಿಮಾದಲ್ಲಿ ಒಂದು ರೊಮ್ಯಾಂಟಿಕ್ ಕ್ಯಾರೆಕ್ಟರ್ ಪ್ಲೇ ಮಾಡಿದ್ದೇನೆ. ಒಂದಷ್ಟು ಟ್ವಿಸ್ಟ್‍ಗಳು ಚಿತ್ರದಲ್ಲಿದೆ. ಮೊದಲಬಾರಿಗೆ ಇಂಥದ್ದೊಂದು ಚಿತ್ರದಲ್ಲಿ ಆ್ಯಕ್ಟ್ ಮಾಡುತ್ತಿರುವುದು ಖುಷಿ ತಂದಿದೆ ಎಂದರು. ಇನ್ನು ಪವನ್ ಶೆಟ್ಟಿ ಈ ಚಿತ್ರದ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದ ಬಗ್ಗೆ ಮಾತನಾಡಿದ ಪವನ್ ಶೆಟ್ಟಿ, ಈ ಚಿತ್ರದಲ್ಲಿ ಎರಡು ನನಗೆ ಶೇಡ್ ಇರುವ ಪಾತ್ರಗಳಿದ್ದು, ಜನರಿಗೆ ಇಷ್ವವಾಗಲಿದೆ ಎಂದರು. ವಿಶಾಖಿನಿ ಚಿತ್ರದಲ್ಲಿ ಅನಿತಾ ಭಟ್ ಮತ್ತು ಪವನ್ ಶೆಟ್ಟಿ ಅವರೊಂದಿಗೆ ವಿಶಾಲ್, ಶಕುರಾಣಾ ಮೊದಲಾದ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಹಾಡುಗಳಿಗೆ ಎಂ.ಸಂಜೀವ್‍ರಾವ್ ಸಂಗೀತ ಸಂಯೋಜನೆ ಮಾಡಿದ್ದಾರೆ. ನೃತ್ಯ ನಿರ್ದೇಶಕ ತ್ರಿಭುವನ್ ನೃತ್ಯ ನಿರ್ದೇಶನ ಮಾಡಿದ್ದಾರೆ. ರಮೇಶ್ ಕಾಯಿರಾ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.

Facebook Comments

Sri Raghav

Admin