ಸೊಗಡು ಶಿವಣ್ಣಗೆ ಪಕ್ಷದಿಂದ ಗೇಟ್ ಪಾಸ್ ನೀಡಲು ಯಡಿಯೂರಪ್ಪ ಕಸರತ್ತು..?

ಈ ಸುದ್ದಿಯನ್ನು ಶೇರ್ ಮಾಡಿ

Yadiyurappa-And-Sogadu-Shiv

ಬೆಂಗಳೂರು, ನ.10- ಮಾಜಿ ಸಚಿವ ಸೊಗಡು ಶಿವಣ್ಣ ಅವರನ್ನು ಪಕ್ಷದಿಂದ ಹೊರ ಹಾಕಲು ಬಿಜೆಪಿಯಲ್ಲಿ ಈಗ ಕಾರ್ಯಾಚರಣೆ ಆರಂಭಗೊಂಡಿದೆ.
ಶಿವಣ್ಣ ಅವರು ಬಿಜೆಪಿ ರಥಯಾತ್ರೆ ಬಗ್ಗೆ ಪಕ್ಷ ವಿರೋಧಿ ಹೇಳಿಕೆ ನೀಡಿದ್ದಾರೆಂದು ಹೈಕಮಾಂಡ್ ಬಳಿ ದೂರು ನೀಡಲು ಸಿದ್ಧತೆಗಳು ನಡೆದಿದೆ. ಮೊದಲಿನಿಂದಲೂ ಯಡಿಯೂರಪ್ಪ ಹಾಗೂ ಶಿವಣ್ಣ ಅವರ ಮಧ್ಯೆ ಜಂಗಿ ಕುಸ್ತಿ ನಡೆಯುತ್ತಲೇ ಇದೆ. ಬಿ.ಎಸ್.ಯಡಿಯೂರಪ್ಪನವರ ಕೆಲವು ನಿರ್ಧಾರಗಳಿಗೆ ಅತೃಪ್ತಿ ವ್ಯಕ್ತಪಡಿಸಿರುವ ಮುಖಂಡರ ಗುಂಪಿನಲ್ಲಿ ಶಿವಣ್ಣ ಕೂಡ ಇದ್ದರು. ಅವರಿಗೆ ನೋಟಿಸ್ ಕೂಡ ನೀಡಲಾಗಿತ್ತು.ಆ ನಂತರ ಬೆಂಗಳೂರಿನಲ್ಲಿ ಕೂಡ ಅತೃಪ್ತರ ಸಮಾವೇಶ ನಡೆದಿತ್ತು. ಅದರಲ್ಲೂ ಶಿವಣ್ಣ ಕಾಣಿಸಿಕೊಂಡಿದ್ದರು. ಇದಕ್ಕೂ ಮುನ್ನ ಶಿವಣ್ಣ ಮತ್ತಿತರರಿಗೆ ನೀಡಿದ್ದ ನೋಟಿಸ್ ವಾಪಸ್ ಪಡೆಯಬೇಕು ಎಂದು ದೆಹಲಿಯಲ್ಲಿ ನಡೆದ ಸಂಧಾನ ಸಭೆಯಲ್ಲಿ ತೀರ್ಮಾನ ಆಗಿತ್ತು.

ಪರಿವರ್ತನಾ ಯಾತ್ರೆಯಿಂದ ದೂರ ಉಳಿದ ಶಿವಣ್ಣ:

ಮುಂದಿನ ವಿಧಾನಸಭೆಗೆ ಭರ್ಜರಿ ತಯಾರಿ ನಡೆಸಿರುವ ಬಿಜೆಪಿ ರಾಜ್ಯದ್ಯಾಂತ ಪರಿವರ್ತನಾ ಯಾತ್ರೆಯಲ್ಲಿ ಹಮ್ಮಿಕೊಂಡಿದೆ. ಈ ಯಾತ್ರೆ ಮೊನ್ನೆ ತುಮಕೂರಿಗೆ ಹೋಗಿತ್ತು. ಇದರಲ್ಲಿ ಸೊಗಡು ಶಿವಣ್ಣ ಪಾಲ್ಗೊಂಡಿರಲಿಲ್ಲ. ಇದರಿಂದ ಯಡಿಯೂರಪ್ಪ ಅವರ ಕಣ್ಣು ಮತ್ತಷ್ಟು ಕೆಂಪಾಗುವಂತೆ ಮಾಡಿತ್ತು.

ಸೊಗಡು ಶಿವಣ್ಣಗೆ ಟಿಕೆಟ್ ಕಟ್ ಮಾಡಿದ ಬಿಎಸ್‍ವೈ:

ತುಮಕೂರು ನಗರ ವಿಧಾನಸಭಾ ಕ್ಷೇತ್ರದಿಂದ ಸತತವಾಗಿ ನಾಲ್ಕು ಬಾರಿ ಜಯಗಳಿಸಿದ್ದ ಮಾಜಿ ಸಚಿವ ಸೊಗಡು ಶಿವಣ್ಣ ಅವರಿಗೆ 2018ರ ವಿಧಾನಸಭೆ ಟಿಕೆಟ್ ಕೈ ತಪ್ಪಲಿದೆ. ಶಿವಣ್ಣ ಬದಲಿಗೆ ತುಮಕೂರು ಬಿಜೆಪಿಯ ಜಿಲ್ಲಾಧ್ಯಕ್ಷ ಜ್ಯೋತಿ ಗಣೇಶ್ ಹೆಸರನ್ನು ಬಿ.ಎಸ್.ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ. ಇದರಿಂದ ಶಿವಣ್ಣಗೆ ಭಾರೀ ಹಿನ್ನಡೆಯಾಗಿದೆ. ಜಿಲ್ಲಾಧ್ಯಕ್ಷರ ಆಯ್ಕೆ ವಿಚಾರದಲ್ಲಿ ಇತರೆ ನಾಯಕರುಗಳ ಸಲಹೆ, ಅಭಿಪ್ರಾಯಗಳನ್ನು ಕೇಳದೆ ಯಡಿಯೂರಪ್ಪ ಅವರು ಸ್ವನಿರ್ಧಾರ ತೆಗೆದುಕೊಂಡಿದ್ದರಿಂದ ಕೆಲ ಬಿಜೆಪಿ ನಾಯಕರು ಮುನಿಸಿಕೊಂಡಿದ್ದರು. ಇದರಲ್ಲಿ ಶಿವಣ್ಣ ಕೂಡ ಇದ್ದರು. ಇದರಿಂದ ಬಿಎಸ್‍ವೈ ಹಾಗೂ ಶಿವಣ್ಣನ ನಡುವೆ ಶೀತಲ ಸಮರ ನಡೆದಿತ್ತು.

Facebook Comments

Sri Raghav

Admin