ಹುಷಾರು ಸೈಕೋ ಶಂಕ್ರ ಬರ್ತಾವ್ನೆ…

ಈ ಸುದ್ದಿಯನ್ನು ಶೇರ್ ಮಾಡಿ

psyco-1

ಬೆಳ್ಳಿಪರದೆಯ ಮೇಲೆ ಅಬ್ಬರಿಸಲು ಸೈಕೋಶಂಕ್ರ ಸಿದ್ಧನಾಗಿದ್ದಾನೆ, ಪ್ರೇಕ್ಷಕರ ಗಮನವನ್ನು ತನ್ನತ್ತ ಸಳೆಯುವುದಕ್ಕೆ ಏನೆಲ್ಲಾ ಬೇಕೋ ಎಲ್ಲ ತಯಾರಿಯನ್ನು ಮಾಡಿಕೊಂಡೇ ಬಂದಿದ್ದಾನೆ. ಆದಿಶಕ್ತಿ ಕ್ರಿಯೇಷನ್ಸ್ ಹಾಗೂ ಮ್ಯಾನ್ ಲಿಯೋ ಪ್ರೊಡಕ್ಷನ್ಸ್ ಲಾಂಛನದಲ್ಲಿ ಪ್ರಭಾಕರ್ ಎಸ್ ಹಾಗೂ ಮಂಜುಳಾ ಪಿ ಅವರು ನಿರ್ಮಿಸಿರುವ ಸೈಕೋ ಶಂಕ್ರ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಪುನೀತ್ ಆರ್ಯ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಶ್ರೀಧರ್ ಕಶ್ಯಪ್ ಸಂಗೀತ ನಿರ್ದೇಶನವಿದೆ. ರವಿ ಬಸ್ರೂರು ಹಿನ್ನೆಲೆ ಸಂಗೀತ, ನಿತಿನ್ ಛಾಯಾಗ್ರಹಣ, ಎನ್.ಎಂ.ವಿಶ್ವ ಸಂಕಲನ, ಅಲ್ಟಿಮೆಟ್ ಶಿವು ಸಾಹಸ ನಿರ್ದೇಶನ ಹಾಗೂ ರವಿ ಪೂಜಾರ್ ಅವರ ಕಲಾ ನಿರ್ದೇಶನವಿರುವ ಈ ಚಿತ್ರದ ಹಾಡುಗಳನ್ನು ಪುನೀತ್ ಆರ್ಯ ಅವರೆ ಬರೆದಿದ್ದಾರೆ. ಪ್ರಣವ್, ಶರತ್ ಲೋಹಿತಾಶ್ವ, ನವರಸನ್, ಯಶಸ್ ಸೂರ್ಯ, ವಿಜಯ್ ಚೆಂಡೂರು, ಪೂಜಾ, ಅಮೃತ ರಾಮಮೂರ್ತಿ, ರಿಶಿಕಾ, ವೇದಶ್ರೀ ನಾರಾಯಣ್, ಶೃಂಗೇರಿ ರಾಮಣ್ಣ ಮುಂತಾದವರು ಈ ಚಿತ್ರದ ತಾರಾಬಳಗವಿದೆ.

Facebook Comments

Sri Raghav

Admin