ಅಪಾಯಕಾರಿ ಗಂಧಕದ ಡೈಆಕ್ಸೈಡ್ ಹೊರಹೊಮ್ಮಿಸುವಲ್ಲಿ ಚೀನಾ ಹಿಂದಿಕ್ಕಿದ ಭಾರತ…!

ಈ ಸುದ್ದಿಯನ್ನು ಶೇರ್ ಮಾಡಿ

Sulfer--01

ಬೀಜಿಂಗ್, ನ.11-ನವದೆಹಲಿ ಬೀಜಿಂಗ್ ನಗರಕ್ಕಿಂತಲೂ 10 ಪಟ್ಟು ವಾಯುಮಾಲಿನ್ಯದ ಕುಖ್ಯಾತಿಗೆ ಪಾತ್ರವಾಗಿರುವಾಗಲೇ ಮತ್ತೊಂದು ಪರಿಸರ ಆಘಾತಕಾರಿ ಸಂಗತಿಯೊಂದು ಹೊರಬಿದ್ದಿದೆ. ಗಂಧಕದ ಡೈ-ಆಕ್ಷೈಡ್ ಹೊರಹೊಮ್ಮಿಸುವಲ್ಲಿ ಭಾರತ ಚೀನಾವನ್ನು ಹಿಂದಿಕ್ಕಿ ಅಗ್ರ ಸ್ಥಾನದಲ್ಲಿದೆ ಎಂದು ಅಮೆರಿಕದ ಅಧ್ಯಯನವೊಂದು ತಿಳಿಸಿದೆ. ಸಲ್ಫರ್ ಡೈಆಕ್ಸೈಡ್ ಮಾಲಿನ್ಯಕಾರಕ ಅನಿಲವಾಗಿದ್ದು, ಮನುಷ್ಯನ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.

2007ರ ಬಳಿಕ ಚೀನಾದ ಗಂಧಕದ ಡೈಆಕ್ಸೈಡ್ ಹೊರಸೂಸುವಿಕೆ ಪ್ರಮಾಣ ಶೇ.75ರಷ್ಟು ಕಡಿಮೆಯಾಗಿದೆ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಭಾರತದಲ್ಲಿ ಶೇ.50ರಷ್ಟು ಹೆಚ್ಚಾಗಿದೆ ಎಂದು ಮೇರಿಲ್ಯಾಂಡ್ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿದ ಅಧ್ಯಯನವೊಂದರಲ್ಲಿ ವಿವರಿಸಲಾಗಿದೆ.  ಗಂಧಕದ ಡೈಆಕ್ಸೈಡ್ ಬಿಡುಗಡೆ ಮಾಡುವಲ್ಲಿ ದೇಶವೊಂದು ಚೀನಾವನ್ನು ಹಿಂದಕ್ಕೆ ಹಾಕಿರುವುದು 20 ವರ್ಷಗಳಲ್ಲಿ ಇದೇ ಮೊದಲಾಗಿದ್ದು, ಈ ಕುಖ್ಯಾತಿಗೆ ಭಾರತದ ಪಾತ್ರವಾಗಿದೆ.  ಸೈಂಟಿಫಿಕ್ ರಿಪೋರ್ಟ್ ಪತ್ರಿಕೆಯಲ್ಲಿ ಗುರುವಾರ ಪ್ರಕಟವಾದ ಈ ವರದಿಗೆ ಚೀನಾದ ಮಾಧ್ಯಮಗಳು ವ್ಯಾಪಕ ಪ್ರಚಾರ ನೀಡಿವೆ. ಚೀನಾ ಮತ್ತು ಭಾರತ ಜಗತ್ತಿನ ಬೃಹತ್ ಕಲ್ಲಿದ್ದಲು ಬಳಕೆದಾರ ದೇಶಗಳಾಗಿವೆ. ಈ ಇಂಧನದಲ್ಲಿ ಶೇ.3ರಷ್ಟು ಗಂಧಕವಿದೆ. ಈ ಎರಡೂ ದೇಶಗಳಲ್ಲೂ ಇರುವ ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರಗಳು ಮತ್ತು ಕಲ್ಲಿದ್ದಲು ಉರಿಸುವ ಕಾರ್ಖಾನೆಗಳಿಂದ ಗಂಧಕದ ಡೈಆಕ್ಸೈಡ್ ವ್ಯಾಪಕವಾಗಿ ಹೊರಹೊಮ್ಮುತ್ತಿವೆ.

Facebook Comments

Sri Raghav

Admin