ಎರಡು ಪ್ರತ್ಯೇಕ ಅಪಘಾತ: ಬೈಕುಗಳಲ್ಲಿ ತೆರಳುತ್ತಿದ್ದ ಮೂವರ ದುರ್ಮರಣ

ಈ ಸುದ್ದಿಯನ್ನು ಶೇರ್ ಮಾಡಿ

malavalli
ಮಳವಳ್ಳಿ,ನ.11-ತಡರಾತ್ರಿಸಂಭವಿಸಿದ ಎರಡು ಪ್ರತ್ಯೇಕ ಅಪಘಾತಗಳಲ್ಲಿ ಇಬ್ಬರು ಸ್ನೇಹಿತರು ಸೇರಿದಂತೆ ಮೂವರು ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.

ಅಲಗೂರುಠಾಣೆ: ಸ್ನೇಹಿತನನ್ನು ಮನೆಗೆ ಕರೆದೊಯ್ದ ಒಟ್ಟಿಗೆ ಊಟಮಾಡಿ ಬೈಕ್‍ನಲ್ಲಿ ಡ್ರಾಪ್ ಮಾಡಲು ಹೋಗುತ್ತಿದ್ದಾಗ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆಡಿಕ್ಕಿಹೊಡೆದ ಪರಿಣಾಮ ಇಬ್ಬರೂ ಸಾವನ್ನಪ್ಪಿದ್ದಾರೆ. ಬಾಣ ಸಮುದ್ರ ಗ್ರಾಮದ ಶಶಿಕುಮಾರ್(22) ಹಾಗೂ ಅಲಗೂರು ಗ್ರಾಮದ ಪ್ರತಾಪ್(24) ಮೃತ ದುರ್ದೈವಿಗಳು. ಪಾನಿಪುರಿ ವ್ಯಾಪಾರ ಮಾಡುತ್ತಿದ್ದ ಪ್ರತಾಪ್ ಹಾಗೂ ಶಶಿಕುಮಾರ್ ಸ್ನೇಹಿತರಾಗಿದ್ದು , ರಾತ್ರಿ 8 ಗಂಟೆಯಲ್ಲಿ ಪ್ರತಾಪ್‍ನನ್ನು ತನ್ನ ಮನೆಗೆಕರೆದೊಯ್ದು ಒಟ್ಟಿಗೆ ಊಟಮಾಡಿದ್ದಾರೆ. 10 ಗಂಟೆ ಸಂದರ್ಭದಲ್ಲಿ ಸ್ನೇಹಿತ ಪ್ರತಾಪ್‍ನನ್ನು ಅಲಗೂರಿಗೆ ಡ್ರಾಪ್ ಮಾಡಲು ತನ್ನ ಬೈಕ್‍ನಲ್ಲಿ ಹೋಗುತ್ತಿದ್ದಾಗ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಶಶಿಕುಮಾರ್ ತಲೆಗೆ ಗಂಭೀರ ಪೆಟ್ಟಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಗಂಭೀರ ಗಾಯಗೊಂಡಿದ್ದ ಪ್ರತಾಪ್‍ನನ್ನು ಸ್ಥಳೀಯರು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮಾರ್ಗ ಮಧ್ಯೆ ಈತ ಕೊನೆಯುಸಿರೆಳೆದಿದ್ದಾನೆ. ಈ ಸಂಬಂಧ ಅಲಗೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಇಬ್ಬರ ಶವಗಳನ್ನು ಮಳವಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಹಸ್ತಾಂತರಿಸಿದ್ದಾರೆ.

ಮಳವಳ್ಳಿ ಗ್ರಾಮಾಂತರ: ಮತ್ತೊಂದು ಪ್ರಕರಣದಲ್ಲಿ ಜಟಕನಪುರದಿಂದ ವ್ಯಕ್ತಿಯೊಬ್ಬರು ಮಳವಳ್ಳಿಗೆ ಬಂದು ಕೆಲಸ ಮುಗಿಸಿ ರಾತ್ರಿ ವಾಪಸ್ ಬೈಕ್‍ನಲ್ಲಿ ಹಿಂದಿರುಗುತ್ತಿದ್ದಾಗ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಜಟಕನಪುರದ ಮಹದೇವು(66) ಮೃತಪಟ್ಟ ಬೈಕ್ ಸವಾರ. ರಾತ್ರಿ 9.30ರಲ್ಲಿ ಸುಲ್ತಾನ್ ರಸ್ತೆ ಮುಖಾಂತರ ಬೈಕ್‍ನಲ್ಲಿ ಮಹದೇವು ಅವರು ಮನೆಗೆ ಹೋಗುತ್ತಿದ್ದಾಗ ಈ ಅವಘಡಸಂಭವಿಸಿದೆ. ಮಳವಳ್ಳಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಮೃತ ದೇಹವನ್ನು ಹಸ್ತಾಂತರಿಸಿದ್ದಾರೆ.

[ ನಿಮ್ಮವರಿಗೂ ಈ ಸುದ್ದಿಯನ್ನು ತಪ್ಪದೆ ಶೇರ್ ಮಾಡಿ ]

Facebook Comments

Sri Raghav

Admin