ತಮಿಳುನಾಡಿನಲ್ಲಿ ಮುಂದುವರೆದ ಐಟಿ ಶೋಧ, ರಹಸ್ಯ ಕೋಣೆ, ಭಾರೀ ಸಂಪತ್ತು ಪತ್ತೆ

ಈ ಸುದ್ದಿಯನ್ನು ಶೇರ್ ಮಾಡಿ

Jaya--02 ಪುದುವೈ(ಪುದುಚೇರಿ), ನ.11- ಅಕ್ರಮ ಆಸ್ತಿ ಗಳಿಕೆ ಹಾಗೂ ತೆರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಐಎಡಿಎಂಕೆಯಿಂದ ಹೊರಹಾಕಲ್ಪಟ್ಟ ಟಿಟಿವಿ ದಿನಕರನ್ ಅವರ ಕಚೇರಿ, ನಿವಾಸಗಳ ಮೇಲೆ 3ನೇ ದಿನವೂ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮುಂದುವರೆಸಿದ್ದಾರೆ. ಪುದುಚೇರಿಯಲ್ಲಿರುವ ತೋಟದ ಮನೆಯಲ್ಲಿ 9 ರಹಸ್ಯ ಕೋಣೆಗಳು ಪತ್ತೆಯಾಗಿದ್ದು, ಅದರಲ್ಲಿ ಅಪಾರ ಪ್ರಮಾಣದ ಚಿನ್ನ, ಬೆಳ್ಳಿ, ವಜ್ರ-ವೈಢೂರ್ಯಗಳ ನಿಧಿ ಕಂಡುಬಂದಿವೆ.ನಿನ್ನೆ 2 ರಹಸ್ಯ ಕೋಣೆಗಳು ಪತ್ತೆಯಾಗಿದ್ದು, ಇಂದು ಮತ್ತೆ ಶೋಧ ಮುಂದುವರೆಸಿದಾಗ 9 ಗುಪ್ತ ಕೊಠಡಿಗಳು ಕಂಡುಬಂದವು. ಪ್ರತಿಯೊಂದು ಕೋಣೆಗಳಲ್ಲೂ ಚಿನ್ನಾಭರಣಗಳು, ವಜ್ರ-ವೈಢೂರ್ಯಗಳು ಸೇರಿದಂತೆ ಅಮೂಲ್ಯ ವಸ್ತುಗಳ ದೊಡ್ಡ ಭಂಡಾರವೇ ಪತ್ತೆಯಾಗಿವೆ.

ಈ ರಹಸ್ಯ ಕೋಣೆಗಳಿಗೆ ಅತ್ಯಾಧುನಿಕ ತಂತ್ರಜ್ಞಾನದ ಸಾಧನಗಳನ್ನು ಅಳವಡಿಸಿ ಬೀಗ ಜಡಿದಿರುವುದರಿಂದ ಅವುಗಳನ್ನು ತೆರೆಯಲು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಪರಿಶ್ರಮದಿಂದ ಅವುಗಳ ಬಾಗಿಲನ್ನು ತೆರೆಯಲಾಯಿತು. ಒಳಪ್ರವೇಶಿಸಿ ನೋಡಿದಾಗ ಅಧಿಕಾರಿಗಳೇ ಬೆಚ್ಚಿ ಬೀಳುವಂತಹ ಅಪಾರ ಸಂಪತ್ತು ಪತ್ತೆಯಾಗಿದೆ. ಇವುಗಳ ಸಹಸ್ರಾರು ಕೋಟಿ ರೂ. ಮೌಲ್ಯದ್ದು ಎಂದು ಅಂದಾಜಿಸಲಾಗಿದೆ.

Facebook Comments

Sri Raghav

Admin