ರಾಂಚಿ-ಬೆಂಗಳೂರು ಏರ್ ಏಷ್ಯಾ ವಿಮಾನದಲ್ಲಿ ಮಹಿಳೆಗೆ ಸಿಬ್ಬಂದಿಯಿಂದ ಕಿರುಕುಳ

ಈ ಸುದ್ದಿಯನ್ನು ಶೇರ್ ಮಾಡಿ

Air-Asia--02

ಬೆಂಗಳೂರು, ನ.11-ವಿಮಾನಯಾನ ಸಂಸ್ಥೆ ಸಿಬ್ಬಂದಿಯಿಂದ ದೌರ್ಜನ್ಯ ಪ್ರಕರಣಗಳು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುತ್ತಿರುವ ಬೆನ್ನೆಲ್ಲೇ, ರಾಂಚಿಯಿಂದ ಬೆಂಗಳೂರಿಗೆ ಬರುತ್ತಿದ್ದ ಮಹಿಳಾ ಪ್ರಯಾಣಿಕರೊಬ್ಬರಿಗೆ ಏರ್ ಏಷ್ಯಾ ವಿಮಾನದ ಮೂವರು ಸಿಬ್ಬಂದಿ ಲೈಂಗಿಕ ಕಿರುಕುಳ ನೀಡಿದರನ್ನೆಲಾದ ಘಟನೆ ಮತ್ತೊಂದು ವಿವಾದ ಸೃಷ್ಟಿಗೆ ಕಾರಣವಾಗಿದೆ.  ಈ ಸಂಬಂಧ ನ್ಯೂ ಬಿಇಎಲ್ ರಸ್ತೆಯ ನಿವಾಸಿ 28 ವರ್ಷ ಮಹಿಳೆಯೊಬ್ಬರು ವಿಮಾನಯಾನ ಸಂಸ್ಥೆ ಮುಖ್ಯಸ್ಥರು ಮತ್ತು ಪೊಲೀಸರಿಗೆ ದೂರು ನೀಡಿದ್ದಾರೆ. ಏರ್ ಏಷ್ಯಾ ಸಿಬ್ಬಂದಿಯಾದ ಸನ್ಮಿತ್ ಕರಂಡಿಕರ್, ಕೈಜದ್ ಸಂಕೋತ್ ಮತ್ತು ಜಿತಿನ್ ರವೀಂದ್ರನ್ ತಮಗೆ ಲೈಂಗಿಕ ಕಿರುಕುಳ ನೀಡಿ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

Facebook Comments

Sri Raghav

Admin