ಸ್ಟುವರ್ಟ್ ಬಿನ್ನಿ, ಅಭಿಮನ್ಯು ಮಿಥುನ್ ಮಾರಕ ದಾಳಿ, ದೆಹಲಿಗೆ ಆಸರೆಯಾದ ಗಂಭೀರ್

ಈ ಸುದ್ದಿಯನ್ನು ಶೇರ್ ಮಾಡಿ

Gamdbheer

ಆಲೂರು,ನ.11- ಕರ್ನಾಟಕ ನೀಡಿರುವ 649 ಬೃಹತ್ ಮೊತ್ತವನ್ನು ಬೆನ್ನಟ್ಟಿ ರುವ ದೆಹಲಿ ತಂಡಕ್ಕೆ ಗೌತಮ್ ಗಂಭೀರ್ ಆಸರೆಯಾಗಿದ್ದಾರೆ. ರಣಜಿ ಪಂದ್ಯದ 2ನೆ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 20 ರನ್‍ಗಳಿಸಿದ್ದ ರಿಷಭ್‍ಪಂತ್ ಪಡೆ ಇಂದು ಆರಂಭದಿಂದಲೂ ಎಚ್ಚರಿಕೆಯ ಆಟಕ್ಕೆ ಮುಂದಾಯಿತು. ಆರಂಭಿಕ ಆಟಗಾರರಾದ ಉನ್ಮುಕ್ತ್ ಚಂದ್ ಹಾಗೂ ಗೌತಮ್ ಗಂಭೀರ್ ವಿನಯ್‍ಕುಮಾರ್ ಬಳಗದ ಬೌಲಿಂಗ್ ಪಡೆಯನ್ನು ಸಾಮರ್ಥವಾಗಿ ಎದುರಿಸುತ್ತಿದ್ದರು.

ಸ್ಟುವರ್ಟ್ ಮೋಡಿ:

ಕರ್ನಾಟಕ ಬೃಹತ್ ಮೊತ್ತ ಗಳಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದ ಸ್ಟುವರ್ಟ್ ಬಿನ್ನಿ ಬೌಲಿಂಗ್‍ನಿಂದಲೂ ತಂಡಕ್ಕೆ ನೆರವಾದರು. ಉನ್ಮುಕ್ತ್ ಚಂದ್ (16 ರನ್,3 ಬೌಂಡರಿ) ವಿಕೆಟ್ ಕಬಳಿಸುವ ಮೂಲಕ ದೆಹಲಿಗೆ ಮೊದಲ ಆಘಾತ ನೀಡಿದರು.

ಗಂಭೀರ್- ಶೌರ್ಯ ಪರಾಕ್ರಮ:

ಉನ್ಮುಕ್ತ್ ಚಂದ್ ಔಟಾಗುತ್ತಿದ್ದಂತೆ ಗಂಭೀರ್‍ರೊಂದಿಗೆ 2ನೆ ವಿಕೆಟ್‍ಗೆ ಜೊತೆಗೂಡಿದ ಧ್ರುವಶೌರ್ಯ ವಿನಯ್‍ಕುಮಾರ್ ಪಡೆಯ ಬೌಲಿಂಗ್ ಪಡೆಯನ್ನು ದಿಟ್ಟವಾಗಿ ಎದುರಿಸಿ ದ್ವಿತೀಯ ವಿಕೆಟ್‍ಗೆ ಶತಕದ ಜೊತೆಯಾಟವಾಡಿದರು. ಭೋಜನ ವಿರಾಮದ ನಂತರ ಆಕ್ರಮಣಕಾರಿ ಆಟಕ್ಕೆ ಮುಂದಾದ ಧ್ರುವ ಶೌರ್ಯ (64 ರನ್, 8 ಬೌಂಡರಿ) ಅಭಿಮನ್ಯು ಮಿಥುನ್‍ಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ನಿತಿನ್ ರಾಣಾ (9 ರನ್, 2 ಬೌಂಡರಿ)ರನ್ನು ಸ್ಟುವರ್ಟ್ ಬಿನ್ನಿ ಡಗ್‍ಔಟ್‍ನತ್ತ ಹೆಜ್ಜೆ ಹಾಕುವಂತೆ ಮಾಡಿದರು. ಪತ್ರಿಕೆ ಮುದ್ರಣಕ್ಕೆ ಹೋಗುವ ವೇಳೆಗೆ ಗೌತಮ್‍ಗಂಭೀರ್ (79 ರನ್, 13 ಬೌಂಡರಿ) ಹಾಗೂ ನಾಯಕ ರಿಷಭ್‍ಪಂತ್ ಕ್ರೀಸ್‍ನಲ್ಲಿದ್ದರು.

Facebook Comments

Sri Raghav

Admin