1.95 ಕೋಟಿ ಮಾನನಷ್ಟ ಪರಿಹಾರ ಕೇಳಿದ ಕ್ರಿಸ್‍ಗೆಲ್

ಈ ಸುದ್ದಿಯನ್ನು ಶೇರ್ ಮಾಡಿ

Gayle--01 ಸಿಡ್ನಿ,ನ.11- ಮಸಾಜ್ ಥೆರಪಿಸ್ಟ್ ಜತೆ ಅನುಚಿತ ವರ್ತನೆ ಪ್ರಕರಣದಲ್ಲಿ ಆಸ್ಟ್ರೇಲಿಯಾ ಮಾಧ್ಯಮಗಳ ವಿರುದ್ಧ ಹೂಡಿದ್ದ ಮಾನನಷ್ಟ ಮೊಕದ್ದಮೆಯಲ್ಲಿ ಜಯ ಸಾಧಿಸಿದ್ದ ವೆಸ್ಟ್ ಇಂಡೀಸ್ ಕ್ರಿಕೆಟಿಗ ಕ್ರಿಸ್ ಗೇಲ್ ಇದೀಗ 1.95 ಕೋಟಿಗೂ ಅಧಿಕ ಪರಿಹಾರ ಮೌಲ್ಯವನ್ನು ಕೋರಿದ್ದಾರೆ. ಮಸಾಜ್ ಥೆರಪಿಸ್ ಜತೆ ಅಸಭ್ಯವಾಗಿ ವರ್ತಿಸಿದ್ದೇನೆ ಎಂದು ಆರೋಪಿಸಿ ಆಸ್ಟ್ರೇಲಿಯಾದ 3 ಪತ್ರಿಕೆಗಳು ತನ್ನ ವಿರುದ್ಧ ಆರೋಪ ಮಾಡಿ ವರದಿ ಪ್ರಕಟಿಸಿವೆ. ಇದರಿಂದ ನನ್ನ ಮಾನಕ್ಕೆ ಹಾನಿಯಾಗಿದೆ ಎಂದು ಆರೋಪಿಸಿ ಗೇಲï, ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ಇದರ ವಿಚಾರಣೆ ನಡೆಸಿದ ನ್ಯಾಯಾಲಯ, ಗೇಲï ಪರ ತೀರ್ಪು ನೀಡಿತ್ತು. ಇದೀಗ ಕ್ರಿಸ್‍ಗೇಲ್ ಆ ಮಾಧ್ಯಮಗಳ ವಿರುದ್ದ ಮಾನನಷ್ಟಕ್ಕೆ 1.95 ಕೋಟಿ ಪರಿಹಾರ ಕೋರಿದ್ದಾರೆ.

[ ನಿಮ್ಮವರಿಗೂ ಈ ಸುದ್ದಿಯನ್ನು ತಪ್ಪದೆ ಶೇರ್ ಮಾಡಿ ]

Facebook Comments

Sri Raghav

Admin