3 ಲಕ್ಷ ಕೆಜಿ ತೂಕದ ವಿಮಾನ ಎಳೆದು 56 ದುಬೈ ಪೊಲೀಸರಿಂದ ವಿಶ್ವದಾಖಲೆ

ಈ ಸುದ್ದಿಯನ್ನು ಶೇರ್ ಮಾಡಿ

Dubai-Policven------02352

ದುಬೈ, ನ.11-ವಿಶ್ವದ ಬೃಹತ್ ನಾಗರಿಕ ವಿಮಾನಕ್ಕೆ ಹಗ್ಗ ಕಟ್ಟಿ ಅದನ್ನು ಕೈಗಳಿಂದ 100 ಮೀಟರ್ ದೂರಕ್ಕೆ ಎಳೆಯುವ ಮೂಲಕ ದುಬೈ ಪೊಲೀಸರು ವಿಶ್ವ ದಾಖಲೆ ನಿರ್ಮಿಸಿದ್ದಾರೆ. ದುಬೈನ 56 ಪೊಲೀಸರು, 3.02 ಲಕ್ಷ ಕೆಜಿ ತೂಕದ ವಿಮಾನವನ್ನು 100 ಮೀಟರ್ ದೂರದವರೆಗೆ ಎಳೆಯುವಲ್ಲಿ ಯಶಸ್ವಿಯಾದರು. ಈ ಮೂಲಕ 2011ರಲ್ಲಿ ಹಾಂಕಾಂಗ್‍ನಲ್ಲಿ 100 ಮಂದಿ 2.82 ಲಕ್ಷ ಕಿಲೋ ತೂಕದ ವಿಮಾನ ಎಳೆದು ನಿರ್ಮಿಸಿದ್ದ ವಿಶ್ವದಾಖಲೆಯನ್ನು ಅಳಿಸಿ ಹಾಕಿದ್ದಾರೆ.

[ ನಿಮ್ಮವರಿಗೂ ಈ ಸುದ್ದಿಯನ್ನು ತಪ್ಪದೆ ಶೇರ್ ಮಾಡಿ ]

Facebook Comments

Sri Raghav

Admin