ಕರ್ನಾಟಕ ಸೇರಿದಂತೆ ರಾಜ್ಯಗಳ ನೀರಾವರಿ ಸುಧಾರಣೆಗೆ 6,000 ಕೋಟಿ ರೂ. ಯೋಜನೆ

ಈ ಸುದ್ದಿಯನ್ನು ಶೇರ್ ಮಾಡಿ

Nitin--02

ನಾಗ್ಪುರ, ನ.12-ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ನೀರಾವರಿ ಸೌಲಭ್ಯಗಳು ಮತ್ತು ಜಲ ಸಾಮಥ್ರ್ಯ ಸುಧಾರಣೆಗಾಗಿ ವಿಶ್ವ ಬ್ಯಾಂಕ್ ನೆರವಿನ 6,000 ಕೋಟಿ ರೂ.ಗಳ ಯೋಜನೆಯನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ. ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದ ಆಗ್ರೋವಿಷನ್ ವಸ್ತುಪ್ರದರ್ಶನದ ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಈ ಯೋಜನೆಯನ್ನು ಘೋಷಿಸಿದರು. ಮಹಾರಾಷ್ಟ್ರ, ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ ಮತ್ತು ಗುಜರಾತ್ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಈ ಯೋಜನೆ ಶೀಘ್ರ ಆರಂಭವಾಗಲಿದೆ. ತಮ್ಮ ಸಚಿವಾಲಯವು ವಿಶ್ವ ಬ್ಯಾಂಕ್‍ಗೆ ಈ ಸಂಬಂಧ ಈಗಾಗಲೇ ಸಲ್ಲಿಸಿರುವ ಪ್ರಸ್ತಾವನೆಗೆ ಒಪ್ಪಿಗೆ ದೊರೆತಿದೆ ಎಂದರು.

ಈ ರಾಜ್ಯಗಳಲ್ಲದೇ ಮಧ್ಯಪ್ರದೇಶ, ಜಾರ್ಖಂಡ್, ಒಡಿಶಾ, ಛತ್ತೀಸ್‍ಗಢ ಮತ್ತು ರಾಜಸ್ತಾನ ರಾಜ್ಯಗಳೂ ಈ ಯೋಜನೆಯಿಂದ ಪ್ರಯೋಜನ ಪಡೆಯಲಿವೆ ಎಂದು ಗಡ್ಕರಿ ಹೇಳಿದರು.  ಇದೇ ಸಂದರ್ಭದಲ್ಲಿ ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು, ನೇರಳ ಏತ ನೀರಾವರಿ ಯೋಜನೆ ಮತ್ತು ಗೋಸಿಖುದ್ರ್ ನೀರಾವರಿ ಯೋಜನೆಯ ಬಲದಂಡೆ ಕಾಲುವೆಗೆ ಜಲಪೂಜೆ ನೆರವೇರಿಸಿದರು.

Facebook Comments

Sri Raghav

Admin