ಕರ್ನಾಟಕ ಸೇರಿ 9 ಹೈಕೋರ್ಟ್‍ಗಳಿಗೆ 40 ಹೊಸ ಜಡ್ಜ್ ಗಳ ನೇಮಕ ಪ್ರಕ್ರಿಯೆಗೆ ಚಾಲನೆ

ಈ ಸುದ್ದಿಯನ್ನು ಶೇರ್ ಮಾಡಿ

Judges--01

ನವದೆಹಲಿ, ನ.12- ಕರ್ನಾಟಕ ಸೇರಿದಂತೆ ದೇಶದ ಒಂಭತ್ತು ನ್ಯಾಯಾಲಯಗಳಿಗೆ 40 ಹೊಸ ನ್ಯಾಯಾಧೀಶರ ನೇಮಕಕ್ಕೆ ಚಾಲನೆ ದೊರೆತಿದೆ. ಈ ಸಂಬಂಧ ಕೇಂದ್ರ ಕಾನೂನು ಸಚಿವಾಲಯ ಈಗಾಗಲೇ ಸಲ್ಲಿಸಿರುವ ಶಿಫಾರಸುಗಳನ್ನು ಸುಪ್ರೀಂಕೋರ್ಟ್ ನ್ಯಾಯಾಧೀಶರುಗಳ ಮಂಡಳಿ (ಕೊಲಿಜಿಯಂ) ಮಾನ್ಯ ಮಾಡಿದೆ. ಈ ವರ್ಷ ಸಂವಿಧಾನಿಕ ನ್ಯಾಯಾಲಯಗಳಿಗೆ 106 ನ್ಯಾಯಾಮೂರ್ತಿಗಳನ್ನು ನೇಮಕ ಮಾಡಿದ್ದರೂ, ಮತ್ತೆ 40 ನ್ಯಾಯಾಧೀಶರನ್ನು ಹೊಸದಾಗಿ ನಿಯೋಜಿಸುವ ಪ್ರಕ್ರಿಯೆಗೆ ಇದರಿಂದ ಚಾಲನೆ ದೊರೆತಂತಾಗಿದೆ.

ಕರ್ನಾಟಕ, ಜಾರ್ಖಂಡ್, ಗುಜರಾತ್, ಮದ್ರಾಸ್ ಮತ್ತು ತ್ರಿಪುರಾ ಸೇರಿದಂತೆ 9 ರಾಜ್ಯಗಳ ಉಚ್ಛ ನ್ಯಾಯಾಲಯಗಳಿಗೆ 40 ನ್ಯಾಯಾಧೀಶರನ್ನು ನೇಮಕ ಮಾಡಲು ಶಿಫಾರಸ್ಸು ಕಳುಹಿಸಲಾಗಿತ್ತು, ಇದಕ್ಕೆ ಕೊಲಿಜಿಯಂ ಸಮ್ಮತಿ ನೀಡಿದ್ದು, ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದೆ ಎಂದು ಕಾನೂನು ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಾನೂನು ಸಚಿವಾಲಯ ಅಂಕಿಅಂಶಗಳ ಪ್ರಕಾರ, ದೇಶದ 24 ಹೈಕೋರ್ಟ್‍ಗಳು 1,079 ನ್ಯಾಯಾಧೀಶರು ಸಾಮಥ್ರ್ಯ ಹೊಂದಿದ್ದು, 413 ಹುದ್ದೆಗಳು ಖಾಲಿ ಇವೆ. ಈ ಉಚ್ಛ ನ್ಯಾಯಾಲಯಗಳು 666 ನ್ಯಾಯಾಧೀಶರೊಂದಿಗೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿವೆ. ನ್ಯಾಯಾಧೀಶರ ಹುದ್ದೆಗಳು ಖಾಲಿ ಇದ್ದರೆ, ಸುಪ್ರೀಂಕೋರ್ಟ್ ಕೊಲಿಜಿಯಂಗೆ ಹೈಕೋರ್ಟ್ ಹಿರಿಯ ನ್ಯಾಯಮೂರ್ತಿಗಳ ಮಂಡಳಿಯು ಮೂವರು ಸದಸ್ಯರು ಹೆಸರುಗಳನ್ನು ಶಿಫಾರಸು ಮಾಡಬೇಕಾಗುತ್ತದೆ. ಈ ಶಿಫಾರಸುಗಳನ್ನು ಮೊದಲು ಕಾನೂನು ಸಚಿವಾಲಯಕ್ಕೆ ಸಲ್ಲಿಸಬೇಕು. ಅದು ಅಭ್ಯರ್ಥಿಗಳ ದಾಖಲೆಗಳ ಬಗ್ಗೆ ಐಬಿ ವರದಿಯನ್ನು ಲಗತ್ತಿಸಿ ಸುಪ್ರೀಂಕೋರ್ಟ್ ಕೊಲಿಜಿಯಂಗೆ ಅಂತಿಮ ಅನುಮೋದನೆಗಾಗಿ ರವಾನಿಸುತ್ತದೆ. ಈಗಾಗಲೇ ಈ ಎಲ್ಲ ವಿಧಾನಗಳು ಪೂರ್ಣಗೊಂಡಿದ್ದು, ಸುಪ್ರೀಂಕೋರ್ಟ್ ಕೊಲಿಜಿಯಂನಿಂದ ಅಧಿಕೃತ ಪ್ರಕಟಣೆ ಬಾಕಿ ಇದೆ.

Facebook Comments

Sri Raghav

Admin