ಕೈಕೊಟ್ಟ ಮಿತ್ರಪಕ್ಷಗಳು : ಮುಷರ್ರಫ್ ಮೈತ್ರಿಕೂಟಕ್ಕೆ ಭಾರೀ ಹಿನ್ನಡೆ

ಈ ಸುದ್ದಿಯನ್ನು ಶೇರ್ ಮಾಡಿ

Mushraf--01

ಇಸ್ಲಾಮಾಬಾದ್, ನ.12-ಮಹಾಮೈತ್ರಿ ರಚನೆಯೊಂದಿಗೆ ಮತ್ತೆ ಅಧಿಕಾರ ಗದ್ದುಗೆ ಹಿಡಿಯುವ ಪಾಕಿಸ್ತಾನ ಸರ್ವಾಧಿಕಾರಿ ಪರ್ವೆಜ್ ಮುಷರ್ರಫ್ ಯತ್ನಕ್ಕೆ ಭಾರೀ ಹಿನ್ನಡೆಯಾಗಿದೆ. 23 ಪಕ್ಷಗಳ ಮಹಾ ಮೈತ್ರಿಕೂಟ ರಚಿಸುವುದಾಗಿ ನಿನ್ನೆಯಷ್ಟೇ ಘೋಷಿಸಿದ್ದ ಪಾಕಿಸ್ತಾನದ ಮಾಜಿ ಅಧ್ಯಕ್ಷರಿಗೆ ಈ ಬೆಳವಣಿಗೆ ಮುಖಭಂಗ ಉಂಟು ಮಾಡಿದೆ.  ತಮ್ಮ ನೇತೃತ್ವದ ಅವಾಮಿ ಇತ್ತೇಹಾದ್ ಮೈತ್ರಿಕೂಟದಿಂದ ಹಲವಾರು ಪಕ್ಷಗಳು ಹೊರಬಂದಿದ್ದು, ಮುಷರ್ರಫ್‍ರ ರಾಜಕೀಯ ನಡೆಗೆ ಪೆಟ್ಟು ನೀಡಿದೆ. ಪಾಕಿಸ್ತಾನ್ ಅವಾಮಿ ತೆಹ್‍ರಿಕ್ ಮತ್ತು ಮಜ್ಲಿಸ್ ವಹಾದ್-ಎ-ಮುಸ್ಲಿಮೀನ್ ಸೇರಿದಂತೆ ಎರಡು ಪಕ್ಷಗಳು ತಾವು ಅವಾಮಿ ಇತ್ತೇಹಾದ್‍ಗೆ ಸೇರುವುದಿಲ್ಲ ಎಂದು ಸ್ಷಷ್ಟಪಡಿಸಿವೆ.

Facebook Comments

Sri Raghav

Admin