ಚಿನ್ನಮ್ಮನ ಚಿನ್ನದ ಕೋಟೆಗೆ ಮತ್ತೆ ಐಟಿ ಲಗ್ಗೆ

ಈ ಸುದ್ದಿಯನ್ನು ಶೇರ್ ಮಾಡಿ

Tamil-Nadu-IT-Raid--01

ಚೆನ್ನೈ, ನ.12- ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ದಿ.ಜಯಲಲಿತಾ ಅವರ ಆಪ್ತೆ ವಿ.ಕೆ.ಶಶಿಕಲಾಗೆ ಸೇರಿದ ಜಯಾ ಟಿವಿ ಕಚೇರಿ ಮತ್ತಿತರೆಡೆ ನಡೆದ ಐಟಿ ದಾಳಿ ಮತ್ತು ಶೋಧ ಕಾರ್ಯಾಚರಣೆಯನ್ನು ಸತತ ನಾಲ್ಕನೆ ದಿನವಾದ ಇಂದು ಕೂಡ ಐಟಿ ಅಧಿಕಾಗಳು ಮುಂದುವರೆಸಿದ್ದಾರೆ. ಇಂದು ಪುದುಚೇರಿ, ಚೆನ್ನೈ ಸೇರಿದಂತೆ ತಮಿಳುನಾಡಿನ ವಿವಿಧೆಡೆ 30ಕ್ಕೂ ಹೆಚ್ಚು ಸ್ಥಳಗಳಲ್ಲಿ ಐಟಿ ಅಧಿಕಾರಿಗಳು ಶೋಧ ನಡೆಸಿ ಮತ್ತಷ್ಟು ಅಕ್ರಮ-ಅವ್ಯವಹಾರ ಪತ್ತೆ ಮಾಡಿದ್ದಾರೆ.

ಪತ್ತೆಯಾದ ದಾಖಲೆ ಪತ್ರಗಳನ್ನು ವಶಪಡಿಸಿಕೊಂಡಿರುವ ಐಟಿ ಅಧಿಕಾರಿಗಳಿಗೆ ಚಿನ್ನಮ್ಮ ಒಡೆತನದಲ್ಲಿರುವ ಮಿಡಾಸ್ ಡಿಸ್ಟಿಲರೀಸ್ ಮದ್ಯ ಕಂಪೆನಿಯು ವಿವಿಧೆಡೆ 1500 ಕೋಟಿ ರೂ.ಗಳ ಸಾಲ ಎತ್ತುವಳಿ ಮಾಡಿರುವುದು ಪತ್ತೆಯಾಗಿದೆ. ಇದೇ ವೇಳೆ ಶಶಿಕಲಾ ಅವರೊಂದಿಗೆ ಜೈಲುಶಿಕ್ಷೆ ಅನುಭವಿಸುತ್ತಿರುವ ಇಳವರಸಿ ಸಂಬಂಧಿಕರ ಮನೆಗಳ ಮೇಲೂ ದಾಳಿ ನಡೆದಿದೆ. ಜಯಾ ಟಿವಿ ವ್ಯವಸ್ಥಾಪಕ ನಿರ್ದೇಶಕ ವಿವೇಕ್ ಜಯರಾಮನ್ ಮನೆಯಲ್ಲಿ ಪತ್ತೆಯಾದ ದಾಖಲೆಗಳಿಂದ 150ಕ್ಕೂ ಹೆಚ್ಚು ನಕಲಿ ಬ್ಯಾಂಕ್ ಖಾತೆಗಳು ಇರುವುದು ಕಂಡುಬಂದಿದೆ.

ನಿನ್ನೆ ಪುದುಚೇರಿಯಲ್ಲಿನ ದಿನಕರನ್ ತೋಟದ ಮೇಲೆ ದಾಳಿ ನಡೆಸಿದ ಐಟಿ ಅಧಿಕಾರಿಗಳು 9 ಕೊಠಡಿಗಳಲ್ಲಿದ್ದ ವಜ್ರ-ವೈಢೂರ್ಯ, ಚಿನ್ನಾಭರಣಗಳ ಭಾರೀ ಸಂಪತ್ತು ಮತ್ತು ನಗದನ್ನು ಪತ್ತೆ ಮಾಡಿದ್ದರು. ಇಲಾಖೆ ಮೂಲಗಳ ಪ್ರಕಾರ, ಚೆನ್ನೈನಲ್ಲಿರುವ ಜಯಾ ಟಿವಿ ಕಚೇರಿಯಲ್ಲಿ ಮಹತ್ವದ ದಾಖಲೆ ಪತ್ರಗಳು ಪತ್ತೆಯಾಗಿದ್ದು, ಈ ಪೈಕಿ ಅಘೋಷಿತ ಆಸ್ತಿ ಪತ್ರಗಳು, ಷೇರು ಮಾರುಕಟ್ಟೆ ಹೂಡಿಕೆ ಪತ್ರಗಳು ಸೇರಿದಂತೆ ಇತರೆ ಮಹತ್ವದ ದಾಖಲೆಗಳು ಪತ್ತೆಯಾಗಿವೆ ಎಂದು ಹೇಳಲಾಗಿದೆ.

ಕೇವಲ ಇಷ್ಟು ಮಾತ್ರವಲ್ಲದೆ, ಷೇರು ಮಾರುಕಟ್ಟೆಯಲ್ಲಿ ಹಲವು ನಕಲಿ ಕಂಪೆನಿಗಳ ಹೆಸರಲ್ಲಿ ಬಂಡವಾಳ ಹೂಡಲಾಗಿತ್ತು. ಎಂಬ ಸ್ಫೋಟಕ ವಿಚಾರವನ್ನು ಐಟಿ ಇಲಾಖೆ ಮೂಲಗಳು ತಿಳಿಸಿವೆ. ಇದು ಮಾತ್ರವಲ್ಲದೆ ಜಯಾ ಟಿವಿ ಎಂಡಿ ವಿವೇಕ್ ಜಯರಾಮನ್ ಅವರ ಸಹೋದರಿ ಮತ್ತು ಅಕೆಯ ಗಂಡನ ಹೆಸರಲ್ಲಿ ಶೆಲ್ ಸಂಸ್ಥೆಗಳ ಹೆಸರು ನೊಂದಾಯಿಸಿ ಷೇರು ಮಾರುಕಟ್ಟೆಯಲ್ಲಿ ಭಾರೀ ಪ್ರಮಾಣದ ಹೂಡಿಕೆ ಮಾಡಲಾಗಿದೆ ಎಂಬ ವಿಚಾರವೂ ಬಹಿರಂಗವಾಗಿದೆ.

ಇದಲ್ಲದೆ, ಎರಡು ಸೂಟ್‍ಕೇಸ್‍ಗಳಲ್ಲಿ ಸುಮಾರು 25 ಲಕ್ಷ ಹಣ ಹಾಗೂ ಚಿನ್ನಾಭರಣಗಳು ಪತ್ತೆಯಾಗಿದ್ದು, ಚಿನ್ನಾಭರಣ ದಶ ಮೌಲ್ಯಮಾಪನ ನಡೆಯುತ್ತಿದೆ. ದೆಹಲಿ, ಗುರುಗ್ರಾಮ, ಇಟಾ ಮತ್ತು ಘಾಜಿಯಾಬಾದ್ ಸೇರಿದಂತೆ ಒಟ್ಟು 7 ನಗರಗಳ ಒಟ್ಟು 22 ಪ್ರದೇಶಗಳಲ್ಲಿ ಏಕಕಾಲದಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಜಯಾ ಟಿವಿ, ವಿಕೆ ಶಶಿಕಲಾ ಅವರ ಸಂಬಂಧಿಕರು ಮತ್ತು ಆಪ್ತರ ಮನೆ ಮತ್ತು ಕಚೇರಿಗಳ ಮನೆ ಮೇಲೆ ದಾಳಿ ಮಾಡಲಾಗಿತ್ತು. ಈ ವೇಳೆ ಜಯಾ ಟಿವಿ ಎಂಡಿ ವಿವೇಕ್ ಜಯರಾಮನ್ ಹಾಗೂ ಅವರ ಸಹೋದರಿ ಕೃಷ್ಣ ಪ್ರಿಯಾ ಅವರ ಸಂಬಂಧಿಕರ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಶೋಧ ನಡೆಸಿದ್ದರು.

Facebook Comments

Sri Raghav

Admin