ದಟ್ಟ ಹೊಗೆಯ ದೆಹಲಿಯಲ್ಲಿ ಬೆಳೆಯುತ್ತಿದೆ ಅಪಾಯಕಾರಿ ಕಸದ ಗುಡ್ಡೆ…!

ಈ ಸುದ್ದಿಯನ್ನು ಶೇರ್ ಮಾಡಿ

Delhi--01

ನವದೆಹಲಿ, ಜ.12-ಪ್ರಧಾನಿ ನರೇಂದ್ರ ಮೋದಿ ಅವರ ಸ್ವಚ್ಛ ಭಾರತ ಅಭಿಯಾನವನ್ನು ಅಣಕಿಸುವಂತೆ ದೆಹಲಿಯಲ್ಲಿ ದಟ್ಟ ಧೂಮ ಆವೃತ ಮಲೀನ ಗಾಳಿ ಕುಖ್ಯಾತಿಯ ಕಳಂಕ ತಂದಿರುವಾಗಲೇ ರಾಜಧಾನಿಗೆ ಮತ್ತೊಂದು ಕಂಟಕ ಎಂಬಂತೆ ಕಸದ ರಾಶಿಯ ಗುಡ್ಡೆ ದಿನೇ ದಿನೇ ಬೆಳೆಯುತ್ತಿದೆ. ದೆಹಲಿಯಲ್ಲಿರುವ ಬೃಹತ್ ಘನ ತ್ಯಾಜ್ಯ ಸಂಗ್ರಹಾಗಾರದಲ್ಲಿ ವೃದ್ದಿಯಾಗುತ್ತಿರುವ ಕಸದ ರಾಶಿಯು ದೇಶದ ವಾಸ್ತವ ಸ್ಥಿತಿಗೆ ಸಾಕ್ಷಿಯಾಗಿದೆ. ಕೇಂದ್ರ ಸರ್ಕಾರದ ಪರಿಸರ ಸಚಿವಾಲಯ ನಿಗದಿಗೊಳಿಸಿರುವ ಗರಿಷ್ಠ ಮಿತಿಯಾದ 30 ಮೀಟರ್ ಎತ್ತರವನ್ನು ಮೀರಿ ಬೆಳೆಯುತ್ತಿದ್ದು, ಗಂಭೀರ ಮಾಲಿನ್ಯದ ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.

ದೆಹಲಿ, ಮುಂಬೈ, ಚೆನ್ನೈ, ಕೋಲ್ಕತ್ತಾ, ಬೆಂಗಳೂರು, ಹೈದರಾಬಾದ್, ಅಹಮದಾಬಾದ್ ಸೇರಿದಂತೆ ದೇಶದ ಬಹುತೇಕ ಎಲ್ಲ ನಗರಗಳಲ್ಲಿ ಘನ ತ್ಯಾಜ್ಯಗಳನ್ನು ತೆರೆದ ಸಂಗ್ರಹಗಾರದಲ್ಲಿ ಸುರಿಯಲಾಗುತ್ತದೆ. ಇದರಿಂದ ಆಗಾಗ ಬೆಂಕಿ ಹೊತ್ತಿಕೊಂಡು ದಟ್ಟ ಹೊಗೆ ಆವರಿಸಿ ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತದೆ.

ಬೆಂಗಳೂರು ಅಂಕಿ-ಅಂಶ : ಉದಾಹರಣೆಗೆ ಬೆಂಗಳೂರು, ಹೈದರಾಬಾದ್, ಅಹಮದಾಬಾದ್ ಮಹಾನಗರದಲ್ಲಿ 2000 ಇಸವಿಯಲ್ಲಿ ದಿನಕ್ಕೆ 200 ಟನ್‍ಗಳಿಗೂ ಅಧಿಕ ಘನ ತ್ಯಾಜ್ಯ ಉತ್ಪಾದನೆಯಾಗುತ್ತಿತ್ತು. ಇದು ಆತಂಕಕಾರಿ ಪ್ರಮಾಣವಾಗಿದ್ದು, ವರ್ಷದಿಂದ ವರ್ಷಕ್ಕೆ ಇದು ಬೆಳೆಯುತ್ತಲೇ ಇದೆ. ಈ ಪ್ರಮಾಣ 15 ವರ್ಷಗಳ ಬಳಿಕ ಅಂದರೆ 2015ರಲ್ಲಿ 3,700 ಟನ್‍ಗಳಿಗೆ ಏರಿದೆ.

ದೆಹಲಿಯಲ್ಲೂ ಕೂಡ ಘನತ್ಯಾಜ್ಯ ಪ್ರಮಾಣ ಅಪಾಯಕಾರಿ ಮಟ್ಟದಲ್ಲಿ ಏರುತ್ತಿದೆ. 15 ವರ್ಷಗಳ ಹಿಂದೆ ರಾಜಧಾನಿಯಲ್ಲಿ ಪ್ರತಿನಿತ್ಯ 400 ಕಸ ಉತ್ಪಾದನೆಯಾಗುತ್ತಿತ್ತು. ಅದು 2015ರಲ್ಲಿ 8700 ಟನ್‍ಗಳಿಗೆ ಏರಿಕೆಯಾಗಿದೆ. ದೇಶದ ವಾಣಿಜ್ಯ ರಾಜಧಾನಿ ಮುಂಬೈ, ಅಹಮದಾಬಾದ್, ಹೈದರಾಬಾದ್, ಚೆನ್ನೈ, ಕೋಲ್ಕತಾ ನಗರಗಳಲ್ಲೂ ಘನತ್ಯಾಜ್ಯ ಪ್ರಮಾಣದಲ್ಲಿ ಗಣನೀಯ ಏರಿಕೆ ಕಂಡುಬಂದಿದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಅಂಕಿ-ಅಂಶದಿಂದ ತಿಳಿದುಬಂದಿದೆ.

Facebook Comments

Sri Raghav

Admin