ದೆಹಲಿಯ ವಿಮಾನನಿಲ್ದಾಣದಲ್ಲಿ 10 ತಿಂಗಳಲ್ಲಿ 37 ಕೋಟಿ ರೂ. ಮೌಲ್ಯದ 110 ಕೆಜಿ ಚಿನ್ನ ವಶ

ಈ ಸುದ್ದಿಯನ್ನು ಶೇರ್ ಮಾಡಿ

Hydarabad-Gold--01

ನವದೆಹಲಿ, ನ.12-ಈ ವರ್ಷ ಜನವರಿಯಿಂದ ಅಕ್ಟೋಬರ್‍ವರೆಗೆ 10 ತಿಂಗಳ ಅವಧಿಯಲ್ಲಿ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಕಳ್ಳಸಾಗಣೆದಾರರಿಂದ 110 ಕೆಜಿ ಚಿನ್ನ ವಶಪಡಿಸಿಕೊಳ್ಳಲಾಗಿದ್ದು, 62 ಮಂದಿಯನ್ನು ಬಂಧಿಸಲಾಗಿದೆ.  ಈ ಅವಧಿಯಲ್ಲಿ ವಶಪಡಿಸಿಕೊಂಡ ಒಟ್ಟು ಚಿನ್ನದ ಮËಲ್ಯ 37 ಕೋಟಿ ರೂ.ಗಳೆಂದು ಹಿರಿಯ ಕಸ್ಟಮ್ಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.  ಹತ್ತು ತಿಂಗಳ ಅವಧಿಯಲ್ಲಿ ಏರ್‍ಪೋರ್ಟ್‍ನಲ್ಲಿ ಒಟ್ಟು 114 ಕಳ್ಳಸಾಗಣೆ ಪ್ರಕರಣಗಳು ದಾಖಲಾಗಿವೆ. 62 ಕಳ್ಳಸಾಗಣೆದಾರರನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಕಳೆದ ವರ್ಷ ಇದೇ ಅವಧಿಯಲ್ಲಿ 48 ಕೋಟಿ ರೂ. ಬೆಲೆಬಾಳುವ 188 ಕೆಜಿ ಚಿನ್ನ ವಶಪಡಿಸಿಕೊಂಡು 110 ಪ್ರಕರಣಗಳು ದಾಖಲಿಸಿಕೊಳ್ಳಲಾಗಿತ್ತು ಎಂದು ಅವರು ಮಾಹಿತಿ ನೀಡಿದ್ದಾರೆ.

Facebook Comments

Sri Raghav

Admin