ದೇಶದಲ್ಲಿ ಇಸ್ಲಾಮಿಕ್ ಬ್ಯಾಂಕಿಂಗ್‍ಗೆ ಅವಕಾಶ ಇಲ್ಲ : ಆರ್‍ಬಿಐ

ಈ ಸುದ್ದಿಯನ್ನು ಶೇರ್ ಮಾಡಿ

RBI-01RBI

ನವದೆಹಲಿ, ನ.12-ಮಹತ್ವದ ಕ್ರಮವೊಂದರಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್(ಆರ್‍ಬಿಐ) ದೇಶದಲ್ಲಿ ಇಸ್ಲಾಮಿಕ್ ಬ್ಯಾಂಕಿಂಗ್ ಪರಿಚಯಗೊಳಿಸುವ ಪ್ರಸ್ತಾವನೆಗೆ ಅವಕಾಶ ನೀಡದಿರಲು ನಿರ್ಧರಿಸಿದೆ. ಮಾಹಿತಿ ಹಕ್ಕು (ಆರ್‍ಟಿಐ) ಪ್ರಶ್ನೆಯೊಂದಕ್ಕೆ ಈ ಉತ್ತರ ನೀಡಿರುವ ಆರ್‍ಬಿಐ, ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆಗಳಿಗೆ ದೇಶಾದ್ಯಂತ ಎಲ್ಲ ಪೌರರಿಗೆ ವ್ಯಾಪಕ ಮತ್ತು ಸಮಾನ ಅವಕಾಶಗಳು ಲಭ್ಯವಿದೆ. ಈ ಅಂಶವನ್ನು ಪರಿಗಣಿಸಿದ ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವಿವರಿಸಿದೆ.

ಇಸ್ಲಾಮಿಕ್ ಅಥವಾ ಶರಿಯಾ ಬ್ಯಾಂಕಿಂಗ್ ಒಂದು ಹಣಕಾಸು ವ್ಯವಸ್ಥೆಯಾಗಿದ್ದು, ಇಸ್ಲಾಂ ಧರ್ಮದಲ್ಲಿ ನಿಷಿದ್ಧವಾಗಿರುವ ಬಡ್ಡಿ ರಹಿತ ಆರ್ಥಿಕ ನೆರವು ನೀಡುವ ಯೋಜನೆಯಾಗಿದೆ.  ಭಾರತದಲ್ಲಿ ಇಸ್ಲಾಮಿಕ್ ಬ್ಯಾಂಕಿಂಗ್‍ಗೆ ಅವಕಾಶ ನೀಡಬೇಕೆಂದು ಕೋರಿ ಬಂದಿರುವ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಮತ್ತು ಆರ್‍ಬಿಐ ಗಂಭೀರವಾಗಿ ಪರಿಗಣಿಸಲಾಗಿದೆ. ದೇಶದಲ್ಲಿನ ಎಲ್ಲರಿಗೂ ಸಮಾನ ರೀತಿಯಲ್ಲಿ ಬ್ಯಾಂಕಿಂಗ್ ಸೇವೆಗಳು ದೊರೆಯುತ್ತಿದೆ. ಹೀಗಾಗಿ ಇಸ್ಲಾಮಿಕ್ ಬ್ಯಾಂಕಿಂಗ್‍ಗೆ ಅವಕಾಶ ನೀಡುವ ಅನಿವಾರ್ಯತೆ ಇಲ್ಲ ಎಂದು ಆರ್‍ಬಿಐ ಸ್ಪಷ್ಟಪಡಿಸಿದೆ.

Facebook Comments

Sri Raghav

Admin