ನಿಧಿಗಾಗಿ ಜಮೀನಿನಲ್ಲಿ ಪೂಜೆ ಮಾಡುತ್ತಿದ್ದ ಏಳು ಮಂದಿ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

arrested

ನಂಜನಗೂಡು, ನ.12- ತಾಲ್ಲೂಕಿನ ನೇರಳೆ ಗ್ರಾಮದ ಜಮೀನಿನೊಂದರಲ್ಲಿ ನಿಧಿ ಪತ್ತೆಗಾಗಿ ಪೂಜೆ ನಡೆಸುತ್ತಿದ್ದ ಏಳು ಮಂದಿಯನ್ನು ಪೊಲೀಸರು ಬಂಧಿಸಿ, ನಂತರ ಬಿಡುಗಡೆ ಮಾಡಿರುವ ಘಟನೆ ನಡೆದಿದೆ. ನೇರಳೆ ಗ್ರಾಮದ ಸುಧೀರ್, ಹೆಡತಲೆ ಗ್ರಾಮದ ಮಾದೇಶ, ಬೆಂಗಳೂರಿನ ಕೋಣನಕುಂಟೆ ಪೂಜÁರಿ ಸುರಾಜು, ದಕ್ಷಿಣ ಕನ್ನಡ ಜಿಲ್ಲೆಯ ಸೂಳ್ಯ ತಾಲ್ಲೂಕಿನ ರವೀಂದ್ರ, ಸೂಳ್ಯದ ಶಿವಪ್ಪ, ಪುತ್ತೂರಿನ ಪದ್ಮರಾಭ ಹಾಗೂ ಕಾರ್ ಚಾಲಕ ಕಡಪ ತಾಲೂಕಿನ ಸುರೇಶ್ ಬಂಧಿತರು.

ಸುಧೀರ್ ತನ್ನ ಗ್ರಾಮದ ಶಿವಣ್ಣ ಎಂಬುವರ ಜಮೀನಿನಲ್ಲಿ ನಿಧಿಯಿದೆ ಎಂಬ ಮಾಹಿತಿ ಮೇರೆಗೆ ಬೆಂಗಳೂರಿನ ಕೋಣನಕುಂಟೆ ಪೂಜಾರಿ ಸುರಾಜು ನೆರವು ಪಡೆದು ಪೂಜೆ ನಡೆಸಿ ನಿಧಿ ತೆಗೆಯಲು ಹೊಂಚು ಹಾಕುತ್ತಿದ್ದರು. ಎಲ್ಲರೂ ಒಟ್ಟಿಗೆ ಸೇರಿ ಮೊನ್ನೆ ತಡರಾತ್ರಿ ಶಿವಣ್ಣ ಜಮೀನಿನಲ್ಲಿ ಹಳ್ಳ ತೆಗೆದು ಪೂಜೆ ಸಲ್ಲಿಸುತ್ತಿದ್ದ ವಿಷಯ ಇತರೆ ಜಮೀನಿನವರಿಗೆ ತಿಳಿದು ಜಮೀನಿನ ಮಾಲೀಕರಿಗೆ ತಿಳಿಸಿದ್ದಾರೆ. ಗ್ರಾಮಸ್ಥರು ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಸ್ಥಳದಲ್ಲಿ ಬಳಿಸಿದ ಪೂಜಾ ಸಾಮಾಗ್ರಿಗಳು, ತುಳು ಭಾಷೆಯಲ್ಲಿದ್ದ ಜ್ಯೋತಿಷ್ಯ ಪುಸ್ತಕ, ಉಪಕರಣಗಳು ಪತ್ತೆಯಾಗಿವೆ.

ಕೂಡಲೇ ದೊಡ್ಡಕವಲಂದೆ ಪೊಲೀಸ್ ಠಾಣೆಗೆ ವಿಷಯ ಮುಟ್ಟಿಸಿದ ಗ್ರಾಮಸ್ಥರು ಆರೋಪಿಗಳನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ನಿಧಿ ಆಸೆಗಾಗಿ ಈ ಕೆಲಸ ಮಾಡಿರುವುದಾಗಿ ವಿಚಾರಣೆಯಲ್ಲಿ ಒಪ್ಪಿಕೊಂಡಿರುವುದಾಗಿ ವೃತ್ತ ನಿರೀಕ್ಷಕ ಗೋಪಾಲಕೃಷ್ಣ ತಿಳಿಸಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ದೊಡ್ಡಕವಲಂದೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Facebook Comments

Sri Raghav

Admin