ಪದ್ಮಾವತಿ ಸಿನಿಮಾಗೆ ನಿಷೇಧ ಹೇರುವಂತೆ ಪ್ರಧಾನಿಗೆ ಉದಯ್‍ಪುರ್ ರಾಜಮನೆತನ ಪತ್ರ

ಈ ಸುದ್ದಿಯನ್ನು ಶೇರ್ ಮಾಡಿ

Padmavati--02

ಮೇವಾರ್ (ರಾಜಸ್ತಾನ), ನ.12-ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಮತ್ತು ಬೆಡಗಿ ದೀಪಿಕಾ ಪಡುಕೋಣೆ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಪದ್ಮಾವತಿ ಸಿನಿಮಾ ಬಿಡುಗಡೆಗೆ ಒಂದಿಲ್ಲೊಂದು ವಿಘ್ನಗಳು ಎದುರಾಗುತ್ತಲೇ ಇವೆ. ಈ ಸಿನಿಮಾ ತೆರೆ ಕಾಣುವುದಕ್ಕೆ ನಿಷೇಧ ಹೇರುವಂತೆ ಭಾರೀ ಒತ್ತಡಗಳು ವ್ಯಕ್ತವಾಗುತ್ತಿರುವಾಗಲೇ ರಾಜಸ್ತಾನದ ಉದಯಪುರ್‍ನ ರಾಜಮನೆತನವೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು, ಪದ್ಮಾವತಿ ಚಿತ್ರದ ಬಿಡುಗಡೆಗೆ ತಡೆ ನೀಡಿ ಎಂದು ಮನವಿ ಮಾಡಿದೆ.

ಉದಯಪುರ್‍ನ ಮೇವಾರ್ ರಾಜ ಪರಿವಾರದ ಸದಸ್ಯರಲ್ಲಿ ಒಬ್ಬರಾದ ಎಂ.ಕೆ.ವಿಶ್ವರಾಜ್ ಸಿಂಗ್ ಪ್ರಧಾನಿ, ಕೇಂದ್ರ ಸಚಿವರು, ಸೆನ್ಸಾರ್ ಮಂಡಳಿ(ಸಿಬಿಎಫ್‍ಸಿ) ಮುಖ್ಯಸ್ಥ ಪ್ರಸೂನ್ ಜೋಷಿ ಮತ್ತು ಸಂಬಂಧಪಟ್ಟವರಿಗೆ ಪತ್ರ ಬರೆದಿದ್ದಾರೆ. ರಾಜಮನೆತನದ ಗೌರವ ಕಾಪಾಡಲು ಹಾಗೂ ಸಮುದಾಯದ ಮತ್ತು ಸಾರ್ವಜನಿಕರ ಭಾವನೆಗಳಿಗೆ ಧಕ್ಕೆ ಉಂಟು ಮಾಡದಿರಲು ಈ ಸಿನಿಮಾ ಬಿಡುಗಡೆಗೆ ತಡೆಯೊಡ್ಡುವಂತೆ ಅವರು ಮನವಿ ಮಾಡಿದ್ದಾರೆ. ಒಂದು ಸಮುದಾಯ ಮತ್ತು ಪೌರರ ಭಾವನೆಗಳಿಗೆ ಧಕ್ಕೆ ಉಂಟು ಮಾಡುವುದು ಸಂವಿಧಾನದಲ್ಲಿ ಅಪರಾಧ ಎಂಬುದನ್ನು ಉಲ್ಲೇಖಿಸಿರುವ ಅವರು, ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಪ್ರಮಾಣಪತ್ರ ನೀಡುವುದು ಬೇಡ ಹಾಗೂ ಸಿನಿಮಾ ಪ್ರದರ್ಶನಕ್ಕೆ ನಿರ್ಬಂಧ ಹೇರಬೇಕು ಎಂದು ಆಗ್ರಹಿಸಿದ್ದಾರೆ.

ಕೇಂದ್ರ ವಾರ್ತಾ ಸಚಿವರ ಸ್ಮತಿ ಇರಾನಿ, ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್, ರಾಜಸ್ತಾನ ಮುಖ್ಯಮಂತ್ರಿ ವಸುಂಧರ ರಾಜೇ ಹಾಗೂ ಪೊಲೀಸ್ ಇಲಾಖೆಯ ಉನ್ನತಾಧಿಕಾರಿಗಳಿಗೂ ಅವರು ಈ ಸಂಬಂಧ ಪತ್ರ ಬರೆದಿದ್ದಾರೆ.

Facebook Comments

Sri Raghav

Admin