ಪಾಕ್ ಭಯೋತ್ಪಾದನೆಯ ಕೇಂದ್ರ ಬಿಂದು ಎಂದ ಬ್ರಿಟನ್ ಮಾಜಿ ಪ್ರಧಾನಿ

ಈ ಸುದ್ದಿಯನ್ನು ಶೇರ್ ಮಾಡಿ

Gordon-Brown--02

ಲಂಡನ್, ನ.12-ಪಾಕಿಸ್ತಾನ ಭಯೋತ್ಪಾದನೆಯ ಕೇಂದ್ರ ಬಿಂದು ಎಂದು ಆರೋಪಿಸಿರುವ ಬ್ರಿಟನ್ ಮಾಜಿ ಪ್ರಧಾನಿ ಗಾರ್ಡನ್ ಬ್ರೌನ್, ಆ ದೇಶದಲ್ಲಿ ಉಗ್ರರು ಪ್ರಬಲರಾಗುತ್ತಿದ್ದು, ಸರ್ಕಾರ ದುರ್ಬಲವಾಗುತ್ತಿದೆ ಎಂದು ವಿಶ್ಲೇಷಿಸಿದ್ದಾರೆ. ಬ್ರೌನ್ ಅವರು ಬರೆದಿರುವ ಮೈ ಲೈಫ್, ಅವರ್ ಟೈಮ್ಸ್ ಎಂಬ ಆತ್ಮಚರಿತ್ರೆ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ. ಈ ಕೃತಿ ಈ ವಾರ ಬಿಡುಗಡೆಗೊಂಡಿದ್ದು ಪುಸ್ತಕದ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಪಾಕಿಸ್ತಾನದಲ್ಲಿ ಎರಡು ಇಸ್ಲಾಮಿಕ್ ಸ್ಟೇಟ್ ಗುಂಪುಗಳು ಮತ್ತು ಕುಖ್ಯಾತ ಉಗ್ರಗಾಮಿ ಹಕ್ಕಾನಿ ಜಾಲ ನಿರಂತರವಾಗಿ ಬಾಂಬ್‍ಗಳನ್ನು ಸ್ಫೋಟಿಸುತ್ತಾ ಭಾರೀ ವಿಧ್ವಂಸಕ ದಾಳಿಯ ಕೃತ್ಯಗಳನ್ನು ಎಸಗುತ್ತಿವೆ.

ಪಾಕಿಸ್ತಾನ ದುರ್ಬಲವಾಗಿದೆ ಮತ್ತು ಅದು ಭಯೋತ್ಪಾದನೆಯ ಕೇಂದ್ರ ಬಿಂದುವಾಗಿದೆ ಎಂದು ಬ್ರೌನ್ ವಿವರಿಸಿದ್ದಾರೆ.  ಭಾರತೀಯ ಮೂಲಕ ಖ್ಯಾತ ನೇತ್ರ ತಜ್ಞ ಹೆಕ್ಟೇರ್ ಚಾವ್ಲಾ ಅವರೊಂದಿಗಿನ ಒಡನಾಟದ ಸಂಗತಿಗಳನ್ನು ಅವರು ತಮ್ಮ ಆತ್ಮಚರಿತ್ರೆಯಲ್ಲಿ ಪ್ರಮುಖವಾಗಿ ಪ್ರಸ್ತಾಪಿಸಿದ್ದಾರೆ. ಅಲ್ಲದೇ ಅವರದೆ ಆದ ಲೇಬರ್ ಪಕ್ಷದ ನಾಯಕ ಟೋನಿ ಬ್ಲೇರ್ ಜೊತೆಗಿನ ಭಿನ್ನಾಭಿಪ್ರಾಯಗಳು, 2008ರಲ್ಲಿ ಆರ್ಥಿಕ ಬಿಕ್ಕಟ್ಟು ನಿಭಾಯಿಸಿದ ರೀತಿ ಮತ್ತು 2003ರಲ್ಲಿ ಇರಾಕ್ ಯುದ್ಧದ ಸಂಗತಿಗಳು ಅವರ ಪುಸ್ತಕದಲ್ಲಿ ದಾಖಲಾಗಿವೆ.

Facebook Comments

Sri Raghav

Admin